ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ

14 DVD 01
ದೇವದುರ್ಗದಲ್ಲಿ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಪರಿಷತ್ ಪ್ರಾರಂಭೋತ್ಸವ ಹಾಗೂ ಪದಗ್ರಹಣ ಸಮಾರಂಭದಲ್ಲಿ ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಮಾತನಾಡಿದರು. ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಬಸವರಾಜ ಯಾಟಗಲ್, ಡಾ.ಸುಮಂಗಲ ಪತ್ತಾರ್, ಅಮರೇಶ ಕುಂಬಾರ, ಭೀಮೋಜಿರಾವ್ ಜಗತಾಪೆ, ಮಕ್ಕಳ ಪರಿಷತ್ ಅಧ್ಯಕ್ಷ ಎ.ಎಸ್.ಕೆ.ಸ್ವಾಮಿ ಹೂಸಮಠ, ಸುರೇಶ್ ಹೂಗಾರ, ಮಂಜುಳಾ ಅರವಿಂದ್ ಪಾಟೀಲ್, ಆಕಾಶ್, ಹನುಮಂತರಾಯ ಅಂಚೆಸೂಗೂರು, ಕ್ರಾಂತಿಕುಮಾರ್ ಇತರರಿದ್ದರು.
Published on

ದೇವದುರ್ಗ: ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಬೆಳೆಸಲು ಕಸಾಪದಿಂದ ಮಕ್ಕಳ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಲಾಗಿದ್ದು ಇದರಿಂದ ಮಕ್ಕಳ ಸಾಹಿತ್ಯಾಸಕ್ತಿಗೆ ಪ್ರೇರಣೆ ಸಿಗಲಿದೆ ಎಂದು ಕಸಾಪ ಗೌರವ ಅಧ್ಯಕ್ಷ ಶಂಕರ್‌ರಾವ್ ಉಬಾಳೆ ಹೇಳಿದರು.

ಪಟ್ಟಣದ ಮುರಿಗೆಪ್ಪ ಸಾಹು ಪದವಿ ಪೂರ್ವ ಕಾಲೇಜಿನಲ್ಲಿ ಕಸಾಪದಿಂದ ಆಯೋಜಿಸಿದ್ದ ಮಕ್ಕಳ ಸಾಹಿತ್ಯ ಪರಿಷತ್ ಪ್ರಾರಂಭೋತ್ಸವ ಹಾಗೂ ಪದಗ್ರಹಣ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು.


ಮಕ್ಕಳ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದಿದ್ದು ಶ್ಲಾಘನೀಯ. ಮಕ್ಕಳಲ್ಲಿ ಅಡಗಿರುವ ಕ್ರಿಯಾಶೀಲತೆ ಪ್ರತಿಭೆ ಗುರುತಿಸುವುದಕ್ಕೆ ಸಂಘಟನೆಗಳು ಸಹಕಾರಿಯಾಗಲಿವೆ ಎಂದರು.


ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಮ ಮಾತನಾಡಿ, ಪ್ರತಿಯೊಬ್ಬರನ್ನೂ ಸಾಹಿತ್ಯ ಕಡೆ ಸೆಳೆಯುವ ದೃಷ್ಟಿಯಿಂದ ಹತ್ತು ಹಲವು ಕಾರ್ಯಕ್ರಮ ಆಯೋಜಿಸಿ ಪ್ರೋತ್ಸಾಹಿಸಲಾಗುತ್ತಿದೆ. ಕಲೆ, ಸಾಹಿತ್ಯ, ಸಂಗೀತ, ಚಿತ್ರಕಲೆ, ಬರವಣಿಗೆ, ಹಾಡುಗಾರಿಕೆ, ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರುತಿಸಿ ಅವರಿಗೆ ಬೆಂಬಲ ಮತ್ತು ಪ್ರೋತ್ಸಾಹ ನೀಡಲು ಪರಿಷತ್ ಕೆಲಸ ಮಾಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net