

ಹುನಗುಂದ: ಸಂತ ಸೇವಾಲಾಲರ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಹಸೀಲ್ದಾರ್ ನಿಂಗಪ್ಪ ಬಿರಾದಾರ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂತ ಸೇವಾಲಾಲರ 285ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಸಂತ, ಶರಣರು ನಡೆದಾಡಿದ ಭಾರತ ದೇಶ ಸಂಸ್ಕಾರದ ಕಾರಣಕ್ಕೆ ಜಗತ್ತಿಗೆ ಹೆಸರುವಾಸಿವಾಗಿದೆ ಎಂದು ತಿಳಿಸಿದರು.
ಶಿಕ್ಷಕ ಸತೀಶ ರಾಠೋಡ ಉಪನ್ಯಾಸ ನೀಡಿದರು.
ಎಸಿಡಿಪಿ ವಿ.ಎ. ಗಿರಿತಿಮ್ಮಣ್ಣವರ, ಶಿರಸ್ತೇದಾರ ಶ್ರವಣ ಮುಂಡೇವಾಡಿ, ಸಿ.ಜಿ. ಗೌಡರ, ಪ್ರಕಾಶ ಚೌಹಾಣ್, ರಮೇಶ ಮೀಸಿ, ಮೌನೇಶ ಕಮ್ಮಾರ ಇತರರಿದ್ದರು.