

ರೋಣ: ಸಹಸ್ರಾರ್ಜುನರ ಜೀವನ ಆದರ್ಶಗಳನ್ನು ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಸಾಗಬೇಕು ಎಂದು ಎಸ್ಎಸ್ಕೆ ಸಮಾಜದ ತಾಲೂಕಾಧ್ಯಕ್ಷ ಜಗದೀಶ ಬಾಕಳೆ ಹೇಳಿದರು.
ಪಟ್ಟಣದಲ್ಲಿರುವ ಸಿದ್ಧಾರೂಢ ಮಠದ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಸಹಸ್ರಾರ್ಜುನ ಮಹಾರಾಜರ ಭಾವಚಿತ್ರ ಮೆರವಣಿಗೆಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಯುವ ಪೀಳಿಗೆ ಮಹಾತ್ಮರ ತತ್ವಾದರ್ಶಗಳನ್ನು ಪಾಲಿಸಬೇಕು. ಸಮಾಜಕ್ಕೆ ಒಳಿತು ಮಾಡುವ ಸತ್ಕಾರ್ಯಗಳನ್ನು ಮಾಡುತ್ತ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸಿ, ಬೆಳೆಸಿಕೊಂಡು ಹೋಗಬೇಕು ಎಂದರು. ಹನುಮಂತಸಾ ರಂಗ್ರೆಜ್, ಶಂಕರ ಮಿಸ್ಕಿನ್, ಶ್ರೀಧರಸಾ ದಲಬಂಜನ, ಗಿರೀಶ ಸಿಂಗ್ರಿ, ಕೃಷ್ಣಾ ಬಾಕಳೆ, ವಿನೋದ ಕಾಟವಾ, ಈಶ್ವರ ಕಾಟವಾ, ಶಂಕರ ಮೆಹರವಾಡೆ, ಪರಶುರಾಮ ಬಿದರಿ, ಮುಕುಂದ ಕಾಟವಾ, ರಾಘು ದಲಬಂಜನ, ಮಧು ದಲಬಂಜನ, ಜಗದೀಶ ಸಿಂಗ್ರಿ, ಪ್ರಕಾಶ ಸಿಂಗ್ರಿ, ಮಾರುತಿ ಸಿಂಗ್ರಿ, ಗೀತಾ ಬಾಕಳೆ, ಮಂಗಳಾ ಮೆರವಾಡೆ, ಶಕುಂತಲಾ ದಲಬಂಜನ ಭಾರತಿ ದಲಬಂಜನ, ಸುಮಿತ್ರಾಬಾಯಿ ಸಿಂಗ್ರಿ, ರೇಣುಕಾಬಾಯಿ ಸಿಂಗ್ರಿ, ಶಶಿಕಲಾ ಮಿಸ್ಕಿನ್, ಇತರರಿದ್ದರು.