ಆದರ್ಶ ಜೀವನ ಸಾಗಿಸಲು ಸತ್ಸಂಗ ಅವಶ್ಯ

2
ಇಟಗಿ ಸಮೀಪದ ಮೂಕ ಬಸವನಗರದಲ್ಲಿ ಹಮ್ಮಿಕೊಂಡಿದ್ದ ಬೆಳದಿಂಗಳ ಅನುಭಾವ ಕಾರ್ಯಕ್ರಮವನ್ನು ಅಡವಿ ಸಿದ್ದೇಶ್ವರ ಸ್ವಾಮೀಜಿ ಉದ್ಟಾಟಿಸಿದರು. ಮೋದಿನಸಾಬ್ ಖುದಾವಂದ, ವಿಠ್ಠಲ ಹಿಂಡಲಕರ, ಜ್ಯೋತಿಬಾ ಸಾತಪ್ಪನವರ, ನಾಗರಾಜ ಪದ್ಮಪ್ಪನವರ ಇತರರಿದ್ದರು.
Published on

ಇಟಗಿ: ಮಹಾತ್ಮರ ತತ್ತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ಜೀವನ ಸಾಗಿಸಲು ಸತ್ಸಂಗ ಅವಶ್ಯ ಎಂದು ಹಿಡಕಲ್ ಅಡವಿ ಸಿದ್ದೇಶ್ವರ ಮಠದ ಪ್ರಭು ಅಡವಿ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಸಮೀಪದ ಮೂಕ ಬಸವನಗರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 16ನೇ ಬೆಳದಿಂಗಳ ಅನುಭಾವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇರವಾಡ ಪಿಕೆಪಿಎಸ್ ಅಧ್ಯಕ್ಷ ವಿಠ್ಠಲ ಹಿಂಡಲಕರ, ಶಿಕ್ಷಕ ವಿವೇಕ ಕುರಗುಂದ ಮಾತನಾಡಿದರು.

ಭೂದಾನಿ ಮೋದಿನಸಾಬ್ ಖುದಾವಂದ, ಜ್ಯೋತಿಬಾ ಸಾತಪ್ಪನವರ, ನಾಗರಾಜ ಪದ್ಮಪ್ಪನವರ, ಮಾರುತಿ ಮಂಡಾನಿ, ವಿವೇಕ ಕುರಗುಂದ, ಬೈಲೂರು ಪಿಕೆಪಿಎಸ್ ನಿರ್ದೇಶಕ ಗೋಪಾಲ ಹಂಚಿನಮನಿ, ಪ್ರತೀಕ್ಷಾ ಕಾರ್ಕದ, ಸಿದ್ದು ಪಾಟೀಲ, ಮಂಜು ಅಂಕಲಗಿ, ವಾಸುದೇವ ಬಾಗೇವಾಡಿ, ವಿನಾಜ ತಿಗಡಿ, ಮಲ್ಲಪ್ಪ ಇಟಗಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net