ಆದರ್ಶರ ಜೀವನ ತತ್ವಗಳನ್ನು ಪಾಲಿಸಿರಿ

010122 Sankeshwarahala Basaveshwara Circle
ದೇವದುರ್ಗ ತಾಲೂಕು ಸುಂಕೇಶ್ವರಹಾಳದಲ್ಲಿ ಶ್ರೀ ಬಸವೇಶ್ವರ ವೃತ್ತ ಹಾಗೂ ನಾಮಫಲಕವನ್ನು ಶನಿವಾರ ಅನಾವರಣಗೊಳಿಸಲಾಯಿತು.
Published on

ದೇವದುರ್ಗ: ತಾಲೂಕಿನ ಸುಂಕೇಶ್ವರಹಾಳ ಗ್ರಾಮದ ಗೂಗಲ್ ಸಂಪರ್ಕ ರಸ್ತೆಯಲ್ಲಿ ವಿಶ್ವಗುರು ಬಸವೇಶ್ವರ ವೃತ್ತ ಹಾಗೂ ನಾಮಫಲಕವನ್ನು ಶನಿವಾರ ಅನಾವರಣಗೊಳಿಸಲಾಯಿತು.

ಹಿರಿಯ ಮುಖಂಡ ಬೂದಯ್ಯಸ್ವಾಮಿ ಇಂಗಳದಾಳ ಮಾತನಾಡಿ, ಆದರ್ಶ ವ್ಯಕ್ತಿಗಳ ಜೀವನ ಹಾಗೂ ತತ್ವಗಳನ್ನು ಜನರು ಪಾಲಿಸಿ ಸನ್ಮಾರ್ಗದಲ್ಲಿ ನಡೆಯಬೇಕು. ಸುಂಕೇಶ್ವರಹಾಳದಲ್ಲಿ ಶ್ರೀ ಬಸವ ಸಮಿತಿಯಿಂದ ವೃತ್ತ ಆನಾವರಣ ಮಾಡಲಾಗಿದೆ. ಯುವ ಸಮೂಹ ಶರಣರ ವಚನಗಳನ್ನು ಅಧ್ಯಯನ ಮಾಡುವ ಮೂಲಕ ಉತ್ತಮ ಜೀವನ ನಡೆಸಬೇಕು ಎಂದು ಹೇಳಿದರು.

ಬಸವ ಸಮಿತಿಯ ಪ್ರಮುಖರಾದ ಅಯ್ಯನಗೌಡ ಮಾ.ಪಾಟೀಲ್, ಪಂಪನಗೌಡ ಪೊ.ಪಾಟೀಲ್, ಸಣ್ಣ ವೀರೇಶ ಸಾಹು, ಚಂದ್ರು ಸಾಹು, ಬಸವರಾಜ ಸಾಹುಕಾರ, ಮಹಿಪಾಲರೆಡ್ಡಿಗೌಡ, ಮಹೇಶ ಪಾಟೀಲ್, ನಾಗಪ್ಪ ನಾಯಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net