ಐಡಿಯಲ್​​ ಐಸ್​ಕ್ರೀಂ ಸಂಸ್ಥೆಯ ಸ್ಥಾಪಕ ಪ್ರಭಾಕರ ಕಾಮತ್​ ನಿಧನ

ideal
Published on

ಮಂಗಳೂರು: ನಾಡಿನ ಪ್ರಸಿದ್ಧ ಐಸ್‌ಕ್ರೀಂ ಸಂಸ್ಥೆ ಐಡಿಯಲ್​ನ ಸ್ಥಾಪಕರಾದ ಎಸ್‌.ಪ್ರಭಾಕರ ಕಾಮತ್‌ ಶನಿವಾರ ಮುಂಜಾನೆ ನಿಧನರಾದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.

ಅವರು ಕೆಲದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದರು. ಪುತ್ರ, ಐಡಿಯಲ್‌ ಐಸ್‌ ಕ್ರೀಂ ಮುಖ್ಯಸ್ಥ ಮುಕುಂದ ಕಾಮತ್‌ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಮಂಗಳೂರಿನಲ್ಲಿ ಟೈಲರಿಂಗ್‌ ವಸ್ತುಗಳ ವಿತರಣೆ, ಪಟಾಕಿ ವಿತರಣೆ ಮಾಡಿಕೊಂಡಿದ್ದ ಪ್ರಭಾಕರ ಕಾಮತ್‌ ಅವರು, ವರ್ಷಪೂರ್ತಿ ಬೇಡಿಕೆಯ ಉದ್ಯಮ ಪ್ರಾರಂಭಿಸಲು ಮುಂದಾಗಿದ್ದರು. ಅದರಂತೆ 1975ರಲ್ಲಿ ಐಡಿಯಲ್​​ ಪಾರ್ಲರ್‌ ಆರಂಭಿಸಿದ್ದು, ಅವರೇ ಸ್ವತಃ ವಿವಿಧ ನಮೂನೆಯ ಐಸ್‌ ಕ್ರೀಂ ಮನೆಯಲ್ಲಿ ತಯಾರಿಸಿದ್ದರು. ಸ್ವಂತ ಪ್ರಯೋಗ ಹಾಗೂ ಹಲವು ಆವಿಷ್ಕಾರಗಳಿಂದಾಗಿ ಐಡಿಯಲ್​​ ಮನೆಮಾತಾಗಿದೆ. ಶೇ.80 ರಷ್ಟು ಮಾರುಕಟ್ಟೆ ಶೇರ್​ ಹೊಂದಿರುವ ಅತಿದೊಡ್ಡ ಐಸ್​ಕ್ರೀಂ ಕಂಪೆನಿಯಾಗಿ ಬೆಳೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net