ಮಹಿಳಾ ದಿನದ ಅಂಗವಾಗಿ 'ಆದರ್ಶ ದಂಪತಿ' ಸ್ಪರ್ಧೆ; ವಿಡಿಯೋ ಕ್ಲಿಪಿಂಗ್ ಕಳುಹಿಸಿ

Adarsha Dampati Spardhe
Published on

ಹುಬ್ಬಳ್ಳಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕನ್ನಡದ ನಂಬರ್ 1 ದಿನಪತ್ರಿಕೆ 'ವಿಜಯವಾಣಿ' ಮತ್ತು 'ದಿಗ್ವಿಜಯ' ನ್ಯೂಸ್ ವತಿಯಿಂದ 'ಆದರ್ಶ ದಂಪತಿ- ಬಲು ಅಪರೂಪ ನಮ್ಮ ಜೋಡಿ' ಎಂಬ ವಿಶೇಷ ಸ್ಪರ್ಧೆ ಏರ್ಪಡಿಸಲಾಗಿದೆ.

ಪ್ರತಿಯೊಬ್ಬ ಪುರುಷನ ಸಾಧನೆ ಹಿಂದೆ ಮಹಿಳೆ ಇರುತ್ತಾಳೆ. ಈ ಸಾಧನೆಯನ್ನು ಸಾದರಪಡಿಸಲು ವಿನೂತನವಾಗಿ ವೇದಿಕೆ ಕಲ್ಪಿಸಿಕೊಡುವುದು ಈ ಸ್ಪರ್ಧೆಯ ಉದ್ದೇಶ. ವಿವಾಹ ವಾರ್ಷಿಕೋತ್ಸವವು ಸತಿ-ಪತಿಗೆ ಅಪರೂಪದ ಕ್ಷಣವಾಗಿರುತ್ತದೆ. ಈ ಸಂದರ್ಭವನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಮಹಿಳಾ ದಿನಾಚರಣೆ ವೇಳೆಯಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ.

ಸ್ಪರ್ಧೆಯಲ್ಲಿ ಭಾಗವಹಿಸಲು ನಿಯಮಗಳು ಮುಂದಿನಂತಿವೆ...

* ಮದುವೆಯಾಗಿ 20, 30, 40, 50 ವರ್ಷ ಪೂರೈಸಿದ ದಂಪತಿಗಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಪ್ರವೇಶ ಶುಲ್ಕ ಇರುವುದಿಲ್ಲ.

* ಜೀವನದಲ್ಲಿ ಅನುಭವಿಸಿದ ಕಷ್ಟ-ಸುಖದ ಸವಿ ನೆನಪುಗಳನ್ನು ಒಂದೂವರೆ ನಿಮಿಷದಲ್ಲಿ (90 ಸೆಕೆಂಡ್) ಸೂಕ್ತ ಕನ್ನಡ ಚಿತ್ರಗೀತೆಗಳುಳ್ಳ ವಿಡಿಯೋ ಚಿತ್ರೀಕರಣ ಮಾಡಿ ನಮಗೆ ಕಳುಹಿಸಿ.

* ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಯವರಿಗೆ ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ.

* ವಿಜಯವಾಣಿ ಮತ್ತು ದಿಗ್ವಿಜಯ ವತಿಯಿಂದ ಹುಬ್ಬಳ್ಳಿಯಲ್ಲಿ ಏರ್ಪಡಿಸಲಾಗುವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಆಯ್ದ ವಿಡಿಯೋಗಳನ್ನು ಪ್ರಸಾರ ಮಾಡಲಾಗುವುದು.

* ಅತ್ಯಂತ ಸುಂದರವಾಗಿ ಮೂಡಿಬಂದ ವಿಡಿಯೋಗಳನ್ನು ತೀರ್ಪುಗಾರರು ಆಯ್ಕೆ ಮಾಡುವರು. ಆಯ್ಕೆಯಾದ ವಿಡಿಯೋಗಳಿಗೆ ಪ್ರೀತಿಯ ಕಾಣಿಕೆ ನೀಡಿ ದಂಪತಿಯನ್ನು ಸನ್ಮಾನಿಸಲಾಗುವುದು.

* ವಿಡಿಯೋ ಕ್ಲಿಪಿಂಗ್‌ನೊಂದಿಗೆ ದಂಪತಿ ಹೆಸರು, ವಿಳಾಸ, ಎಷ್ಟು ವರ್ಷದ ವಿಭಾಗ ಎಂಬ ಮಾಹಿತಿಯನ್ನು ಟೈಪ್ ಮಾಡಿ ವಾಟ್ಯಾಪ್ ಮಾಡಿರಬೇಕು. ವಿಡಿಯೋ ಕಳುಹಿಸಲು ಕೊನೆಯ ದಿನ ಮಾರ್ಚ್ 4. ಷರತ್ತು ಅನ್ವಯ.

ವಿಡಿಯೋ ಹೇಗಿರಬೇಕು ಎಂಬ ಮಾಹಿತಿ ಈ ಕೆಳಗಿನ ವಿಡಿಯೋದಲ್ಲಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net