

ಕಳಸ: ಇಡಕಣಿ ಪ್ರಾಥಮಿಕ ಕೃಷಿ ಪತ್ತಿನ ಸಂಘ 2022-23ನೇ ಸಾಲಿನಲ್ಲಿ 75 ಕೋಟಿ ರೂ. ವ್ಯವಹಾರ ನಡೆಸಿ 8.28 ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಬಿ.ಪಿ.ಬೋಜರಾಜ್ ಹೇಳಿದರು.
ಸದಸ್ಯರ ಸಭೆಯಲ್ಲಿ ಮಾತನಾಡಿ, ಸಂಘ 3350 ಸದಸ್ಯರು, 94.38 ಲಕ್ಷ ಷೇರು ಬಂಡವಾಳ ಹೊಂದಿದೆ. ಸುಮಾರು 8 ಕೋಟಿ ಠೇವಣಿ ಹೊಂದಿದ್ದು, ಡಿಸಿಸಿ ಬ್ಯಾಂಕ್‌ನಿಂದ 6 ಕೋಟಿ ಕೆಸಿಸಿ ಬೆಳೆಸಾಲ ಪಡೆದಿದೆ. ಸ್ವಂತ ಬಂಡವಾಳದಲ್ಲಿ 8.38 ಕೋಟಿ ವಿವಿಧ ಸಾಲ ನೀಡಿದೆ ಎಂದರು. ಸಕಾಲದಲ್ಲಿ ಸಾಲ ಮರು ಪಾವತಿಸುವಂತೆ ತಿಳಿಸಿದರು.
ನಿರ್ದೇಶಕ ಎಂ.ಪಿ.ಗಿರೀಶ್ ಮಾತನಾಡಿ, ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ವಿವಿಧ ಉದ್ದೇಶದ ಗೋದಾಮು ಹಾಗೂ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಉಪಾಧ್ಯಕ್ಷ ಕೆ.ಟಿ.ವೃಂದಾಪತಿ, ನಿರ್ದೇಶಕರಾದ ಎಂ.ಪಿ.ಗಿರೀಶ್, ಎಚ್.ಆರ್.ಮಹೇಶ್, ಎಂ.ಸಿ.ಸಂತೋಷ್, ವಿ.ಸಿ.ಗೋವರ್ಧನ್, ಪುರುಷೋತ್ತಮ್ ಎ. ಸುವರ್ಣ, ಸುಲೋಚನಾ, ಪ್ರಸಿಲ್ಲಾಸಾನಾ, ನಾಗೇಶ್ ಕೆ. ಹರೀಶ್, ಕೆ.ಎಂ.ರವೀಂದ್ರ ಭಟ್, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರಯಾಗ, ಸಿಇಒ ಸತೀಶ್ ಇದ್ದರು.