

ಹುಬ್ಬಳ್ಳಿ: ಇಲ್ಲಿಯ ಆನಂದನಗರ ಅಂಬೇಡ್ಕರ ರಿಕ್ಷಾ ನಿಲ್ದಾಣದಲ್ಲಿ ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘ ಹಾಗೂ ಹುಬ್ಬಳ್ಳಿ ಆಟೋ ಚಾಲಕರ ಮಾಲಕರ ಸಂಘದಿಂದ ಚಾಲಕರಿಗೆ ಐಡಿ ಹಾಗೂ ಸದಸ್ಯತ್ವದ ಗುರುತಿನ ಚೀಟಿ ನೀಡಲಾಯಿತು.
ಪಾಲಿಕೆ ಸದಸ್ಯ ಆರೀಫ್ ಭದ್ರಾಪುರ, ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ, ಮುರಳಿ ಇಂಗಳಹಳ್ಳಿ, ರಾಜೇಶ್ ಬಿಜ್ವಾಡ್, ಮಹಾವೀರ್ ಬಿಲಾನ್, ದಾವಲಸಾಬ್ ಕೊರಟ್ಟಿ, ಇತರರು ಪಾಲ್ಗೊಂಡಿದ್ದರು.