ಅರಬ್ಬಿಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ಮೂವರು ಮೀನುಗಾರರ ರಕ್ಷಿಸಿದ ಕೋಸ್ಟ್‌ಗಾರ್ಡ್

WhatsApp Image 2021-05-15 at 9.34.29 AM
Published on

ಮಂಗಳೂರು: ಕೇರಳ ಸಮೀಪ ಆಳಸಮುದ್ರದಲ್ಲಿ ತೌಕ್ತೇ ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ್ದ ಮೂವರು ಮೀನುಗಾರರನ್ನು ಕರ್ನಾಟಕದ ಭಾರತೀಯ ತಟರಕ್ಷಣಾ ಪಡೆಯ ಹಡಗು "ವಿಕ್ರಂʼ ಸಿಬ್ಬಂದಿಗಳು ಶನಿವಾರ ರಕ್ಷಣೆ ಮಾಡಿದ್ದಾರೆ. ಕಣ್ಣೂರಿನಿಂದ ಸುಮಾರು ೧೦ ನಾಟಿಕಲ್‌ ಮೈಲಿ ದೂರದಲ್ಲಿ ಅರಬಿ ಸಮುದ್ರದಲ್ಲಿ ಇಂಜಿನ್‌ ಕೆಟ್ಟು ಮೀನುಗಾರಿಕಾ ದೋಣಿ ಅಪಾಯಕ್ಕೆ ಸಿಲುಕಿತ್ತು. ಶುಕ್ರವಾರ ತಡರಾತ್ರಿ ಮೀನುಗಾರರನ್ನು ರಕ್ಷಿಸಿ ಕರೆತರಲಾಗಿದೆ.
ಈ ನಡುವೆ ಭಾರಿ ಗಾಳಿಮಳೆಯ ನಡುವೆ ತಟರಕ್ಷಣಾ ಪಡೆಯ ಸಿಬ್ಬಂದಿಗಳು ಅರಬ್ಬಿಸಮುದ್ರದುದ್ದಕ್ಕೂ ಬಿಗಿ ಪಹರೆ ಏರ್ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net