ಪುತ್ತೂರು: ಮೊಟ್ಟೆತ್ತಡ್ಕ ಐ.ಸಿ.ಎ.ಆರ್-ಗೋಡಂಬಿ ಸಂಶೋಧನಾ ನಿರ್ದೇಶನಾಲಯ (ಡಿ.ಸಿ.ಆರ್)ದಲ್ಲಿ ಗೋಡಂಬಿಯಲ್ಲಿ ಯಾಂತ್ರೀಕರಣದ ವಿಷಯದೊಂದಿಗೆ ಗೋಡಂಬಿ ದಿನ-೨೦೨೫ ಅನ್ನು ಮಾ.೧೧ರಂದು ಬೆಳಗ್ಗೆ ೧೧ಕ್ಕೆ ನಡೆಯಲಿದೆ.
ಮುಖ್ಯ ಅತಿಥಿಯಾಗಿ ಭೋಪಾಲ್ ಐ.ಸಿ.ಎ.ಆರ್-ಸಿ.ಐ.ಎ.ಇ. ನಿರ್ದೇಶಕ ಡಾ. ಸಿ. ಆರ್. ಮೆಹ್ತಾ ಭಾಗವಹಿಸಲಿದ್ದಾರೆ. ಬೆಂಗಳೂರು ಎಟಿಎಆರ್‌ಐ ನಿರ್ದೇಶಕ ಡಾ. ವೆಂಕಟ ಸುಬ್ರಮಣಿಯನ್, ನವದೆಹಲಿ ಅಗ್ರಿ ಇನ್ನೊವೇಟಿವ್ ಇಂಡಿಯಾ ಲಿಮಿಟೆಡ್ ಸಿ.ಇ.ಒ. ಡಾ. ಪ್ರವೀಣ್ ಮಲಿಕ್ ಭಾವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಐ.ಸಿ.ಎ.ಆರ್-ಡಿ.ಸಿ.ಆರ್ ನಿರ್ದೇಶಕ ಡಾ. ಜೆ. ಡಿ. ಅಡಿಗ ವಹಿಸಲಿದ್ದಾರೆ.
ಗೋಡಂಬಿ ರೈತರ ಅನುಕೂಲಕ್ಕಾಗಿ ಡ್ರೋನ್‌ಗಳು, ೩-ಇನ್-೧ ಗೋಡಂಬಿ ಹಣ್ಣು ಮತ್ತು ಬೀಜ ಬಿಡಿಸುವ ಯಂತ್ರ ಪ್ರದರ್ಶನವನ್ನು ಸಹ ಒಳಗೊಂಡಿದೆ. ಗೋಡಂಬಿ ಕೃಷಿಗಾಗಿ ಅಭಿವೃದ್ಧಿಪಡಿಸಿದ ಸುಧಾರಿತ ತಂತ್ರಜ್ಞಾನಗಳು ಮತ್ತು ಸಂಸ್ಥೆಯಿಂದ ಗೋಡಂಬಿ ಹಣ್ಣುಗಳ ವಿವಿಧ ಮೌಲ್ಯವಽತ ಉತ್ಪನ್ನಗಳನ್ನು ಪ್ರದರ್ಶಿಸುವ ಪ್ರದರ್ಶನ ಮಳಿಗೆಯನ್ನು ಹಾಕಿಕೊಳ್ಳಲಾಗಿದೆ.