

ಹುಬ್ಬಳ್ಳಿ: ಇಲ್ಲಿಯ ಐಸಿಎಐ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಮಾ. 15ರಂದು ಸಂಜೆ 5.30ಕ್ಕೆ ನಗರದ ಕೇಶ್ವಾಪುರ ಐಸಿಎಐ ಭವನದಲ್ಲಿ ಏರ್ಪಾಟಾಗಿದೆ.
ಕೇಂದ್ರೀಯ ಐಸಿಎಐ ಸದಸ್ಯ ಸಿ. ಶ್ರೀನಿವಾಸ್ ಹಾಗೂ ಎಸ್ಐಆರ್ಸಿ ಅಧ್ಯೆ ಗೀತಾ ಎ.ಬಿ. ಹಾಗೂ ಮಾಜಿ ಅಧ್ಯಕ್ಷ ಪನ್ನರಾಜ್ ಇವರು ಪದಗ್ರಹಣ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ನೂತನ ಪದಾಧಿಕಾರಿಗಳ ಹೆಸರು ಇಂತಿದೆ.
ಧನಪಾಲ್ ಮುನ್ನೊಳ್ಳಿ ಅಧ್ಯಕ್ಷ, ಅಕ್ಷಯಕುಮಾರ್ ಸಿಂಘಿ ಉಪಾಧ್ಯಕ್ಷ, ರಿಷಬ್ ಉಪಾಧ್ಯಾಯ ಕಾರ್ಯದಶಿರ್, ಅಮಿತ್ ಬಾಬಜಿ ಖಜಾಂಜಿ ಹಾಗೂ ಮಲ್ಲಿಕಾರ್ಜುನ ಪಿಸೆ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.