

ಹುಬ್ಬಳ್ಳಿ : ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯು ದೇಶದಲ್ಲಿ ವಾಣಿಜ್ಯ ಸಂಸ್ಥೆಗಳ ಹಾಗೂ ಕಂಪನಿಗಳ ಲೆಕ್ಕ ಪರಿಶೋಧನೆ ಗುಣಮಟ್ಟ ಹೆಚ್ಚಿಸಲು ಪೀರ್ -ರೀವಿವ್ ಕ್ರ್ರುವನ್ನು ದೇಶದಾದ್ಯಂತ ಹಂತ ಹಂತವಾಗಿ ಜಾರಿಗೊಳಿಸುತ್ತದೆ ಎಂದು ಸಂಸ್ಥೆಯ ಕೇಂದ್ರ ಮಂಡಳಿ ಸದಸ್ಯ ಸಿಎ ಶ್ರೀನಿವಾಸ ಕೋಥಾ ಹೇಳಿದರು.
ಇಲ್ಲಿನ ಐ.ಸಿ.ಎ.ಐ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೀರ್- ರೀವಿವ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದರಿಂದ ಜಾಗತಿಕ ಮಟ್ಟದಲ್ಲಿ ಲೆಕ್ಕಪರಿಶೋಧಕರು ವಿದೇಶಿ ಕಂಪನಿಗಳ ಆಡಿಟ್ ಕಾರ್ಯವನ್ನು ಯಶಸ್ವಿಯಾಗಿ ನೆರವೇರಿಸಲು ಅನುಕೂಲವಾಗುತ್ತದೆ ಎಂದರು.
ನಂತರ ನಡೆದ ತಾಂತ್ರಿಕ ಅಧಿವೇಶನಗಳಲ್ಲಿ ಬೆಂಗಳೂರಿನ ಸಿಎ ಮೋಹನ ಲವಿ ಮತ್ತು ಸಿಎ ಎಲ್ . ಮಾಧವನ್ ಅವರು ಪೀರ್ -ರೀವಿವ್ ನಿಯಮಗಳನ್ನು ವಿವರಿಸಿದರು.
ಹುಬ್ಬಳ್ಳಿ ಐಸಿಎಐ ಶಾಖೆಯ ಅಧ್ಯಕ್ಷ ಸಿಎ ಧನಪಾಲ್ ಮುನ್ನೊಳ್ಳಿ ಸ್ವಾಗತಿಸಿದರು. ಕಾರ್ಯದರ್ಶಿ ಸಿಎ ರಿಷಭ ಉಪಾಧ್ಯಾಯ ವಂದಿಸಿದರು.