ಸಿಎ ಗೌತಮ್ ಪೈ ಡಿ ಭಾರತೀಯ ಲೆಕ್ಕ ಪತ್ರ ಪರಿಶೋಧಕರ ಸಂಸ್ಥೆ ಮಂಗಳೂರು ಶಾಖೆ ನೂತನ ಚೇರ್ಮನ್

mng- feb 22- Gautham Pai d
ಗೌತಮ್ ಪೈ ಡಿ
Published on

ಮಂಗಳೂರು: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ 2024- 25 ನೇ ಸಾಲಿನ ಮಂಗಳೂರು ಶಾಖೆಯ ಚೇರ್ಮನ್ ಆಗಿ ಸಿಎ ಗೌತಮ್ ಪೈ ಡಿ ಆಯ್ಕೆಯಾಗಿದ್ದಾರೆ.ಪಡೀಲ್‌ನ ಐಸಿಎಐ ಭವನದಲ್ಲಿ ಗುರುವಾರ ಜರುಗಿದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಇತರ ಪದಾಧಿಕಾರಿಗಳಾಗಿ ಪ್ರಶಾಂತ್ ಪೈ- ವೈಸ್ ಚೇರ್ಮನ್ ಮತ್ತು ಎಸ್‌ಐಸಿಎಎಸ್‌ಎ ಚೇರ್ಮನ್, ಡೇನಿಯಲ್ ಪಿರೇರ- ಕಾರ್ಯದರ್ಶಿ, ಮಮತಾ ರಾವ್- ಕೋಶಾಧಿಕಾರಿ, ಗೌತಮ್ ನಾಯಕ್ ಎಂ ಮತ್ತು ಪ್ರಸನ್ನ ಶೆಣೈ ಎಂ ಇಬ್ಬರು ಮಾಜಿ ಚೇರ್ಮನ್‌ಗಳು ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸಲಿದ್ದಾರೆ.ಮಂಗಳೂರು ಶಾಖೆಯು 1000 ಕ್ಕೂ ಅಧಿಕ ಸದಸ್ಯರನ್ನು ಹೊಂದಿದ್ದು, 4000 ವಿದ್ಯಾರ್ಥಿಗಳು ಸಂಸ್ಥೆಯ ಜತೆ ಸಂಯೋಜನೆಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net