ಪದ್ಮಶ್ರೀ ಇಬ್ರಾಹಿಂ ಸುತಾರ ಅಂತಿಮಸಂಸ್ಕಾರ; ಇಸ್ಲಾಂ ಧಾರ್ಮಿಕ ವಿಧಿ-ವಿಧಾನದಂತೆ ಅಂತ್ಯಕ್ರಿಯೆ

Ibrahim Suthara
Published on

ಬಾಗಲಕೋಟೆ: ಇಂದು ನಿಧನರಾದ ಖ್ಯಾತ ಪ್ರವಚನಕಾರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ಪಾರ್ಥಿವ ಶರೀರದ ಅಂತಿಮಸಂಸ್ಕಾರ ಇದೀಗ ಪೂರ್ಣಗೊಂಡಿದೆ.

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಇಸ್ಲಾಂ ಧರ್ಮದ ವಿಧಿ-ವಿಧಾನದಂತೆ ಅವರ ಅಂತಿಮಕ್ರಿಯೆ ನೆರವೇರಿತು. ಮಹಾಲಿಂಗಪುರದ ಅವರ ತೋಟದ ಜಮೀನಿನಲ್ಲಿ ನೂರಾರು ಅಭಿಮಾನಿಗಳು, ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.

82 ವರ್ಷದ ಇಬ್ರಾಹಿಂ ಸುತಾರ ಅವರು ರಬಕವಿ-ಬನಹಟ್ಟಿ ತಾಲೂಕಿನ ಮಹಲಿಂಗಪುರದಲ್ಲಿನ ತಮ್ಮ ಭಾವೈಕ್ಯ ನಿವಾಸದಲ್ಲಿ ಇಂದು ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net