ವೃಕ್ಷೋತ್ಥಾನ್​ಗೆ ಐಎಎಸ್​ ಅಧಿಕಾರಿ ನೋಂದಣಿ

IAS officer registered for tree plantation
ಐಎಎಸ್​ ಅಧಿಕಾರಿ ವೈ.ಎಸ್​. ಪಾಟೀಲ
Published on

ವಿಜಯಪುರ : ಹಿರಿಯ ಐಎಎಸ್​ ಅಧಿಕಾರಿ ಮತ್ತು ಕೃಷಿ ಇಲಾಖೆ ಆಯುಕ್ತರಾದ ವೈ.ಎಸ್​. ಪಾಟೀಲ ಅವರು ವೃಕ್ಷೋತ್ಥಾನ್​ ಹೆರಿಟೇಜ್​ ರನ್​ನಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸುವ ಮೂಲಕ ಅಧಿಕಾರಿ ವರ್ಗಕ್ಕೆ ಸ್ಪೂರ್ತಿಯಾಗಿದ್ದಾರೆ.

ನಗರದಲ್ಲಿ ಡಿ. 22 ರಂದು ನಡೆಯಲಿರುವ ವೃಕ್ಷೋತ್ಥಾನ್​ ಹೆರಿಟೇಜ್​ ರನ್​&2024 ಮ್ಯಾರಾಥಾನ್​ನಲ್ಲಿ 5 ಕಿಮೀ. ಓಟದಲ್ಲಿ ವೈ.ಎಸ್​. ಪಾಟೀಲರು ಹೆಸರು ನೋಂದಣಿ ಮಾಡಿದ್ದಾರೆ. ಈ ಮುಂಚೆ ವಿಜಯಪುರ ಉಪವಿಭಾಗಾಧಿಕಾರಿಯಾಗಿ ಮತ್ತು ನಂತರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಅವರು ಸದ್ಯ ತೋಟಗಾರಿಕೆ ಇಲಾಖೆಯ ಆಯುಕ್ತರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net