ಇನ್ ಹೌಸ್ ಫೆಸ್ಟ್ 2025 ಸಮಾರೋಪ

Published on

ಹುಬ್ಬಳ್ಳಿ: ಕೆಎಲ್ಇ ಸಂಸ್ಥೆಯ ಬಿ.ಸಿ.ಎ ಮಹಾವಿದ್ಯಾಲಯ ಆಯೋಜಿಸಿದ್ದ ಐ2ಇ2 (ಇನ್ನೋವೇಶನ್ ಟು ಇನ್ಸ್ಪೆರ್, ಎಕ್ಸಫ್ಲೋರ್ ಟು ಎಕ್ಸಫಿಯರನ್ಸ್) ಎರಡು ದಿನಗಳ ಇನ್ ಹೌಸ್ ಫೆಸ್ಟ್ 2025 ಸಮಾರೋಪ ಸಮಾರಂಭವು ಜಿಮಖಾನ್ ಹಾಲ್ ನಲ್ಲಿ ಇತ್ತೀಚೆಗೆ ಜರುಗಿತು.

ಅತಿಥಿಗಳಾಗಿದ್ದ ಡಾಕೆಟ್ ರನ್ ಟೆಕ್ ಲಿಮಿಟೆಡ್ ಸಂಸ್ಥಾಪಕ ಮತ್ತು ಸಿಇಒ ಅಜಯ ಕಬಾಡಿ, ಉದ್ಯಮಶೀಲತೆಯ ಮಹತ್ವ ತಿಳಿಸಿದರು. ಉದ್ಯಮ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳನ್ನು ಗುರುತಿಸುವ ಒಂದು ಅತ್ಯುತ್ತಮ ಮಾರ್ಗ ಇದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಸಿಎ ವಿಭಾಗದ ಪ್ರೊ. ಹೇಮಾ ಚಿಕ್ಕರಡ್ಡಿ, ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನದ ಪ್ರಭಾವ ಬಹಳಷ್ಟಿದೆ. ವಿದ್ಯಾರ್ಥಿಗಳು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚಿನ ಜ್ಞಾನ ಗಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಫೆಸ್ಟ್ ಅಂಗವಾಗಿ ಹ್ಯಾಕಥಾನ್ ಆಯೋಜಿಸಲಾಗಿತ್ತು. ಹ್ಯಾಕಥಾನ್ ಒಂದು ಕೋಡಿಂಗ್ ಸ್ಪರ್ಧೆಯಾಗಿದ್ದು, ಕ್ರಿಯಾತ್ಮಕ ಸ್ಟಾವೇರ್ ರಚಿಸುವುದರ ಜತೆಗೆ ಸಮಸ್ಯೆ ಪರಿಹಾರ, ವಿಮಾರ್ಶಾತ್ಮಕ ಚಿಂತನೆ, ಸೃಜನಶೀಲತೆ, ತಂಡದ ಕೆಲಸ, ಸಂವಹನ ಮತ್ತು ಸಮಯ ನಿರ್ವಹಣೆ, ಕೌಶಲಗಳನ್ನು ಆಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ವಿದ್ಯಾರ್ಥಿಗಳಿಗೆ ಒಂದು ಸದಾವಕಾಶವಾಗಿತ್ತು.

ಫೆಸ್ಟ್ ನಲ್ಲಿ ಒಟ್ಟು 32 ತಂಡಗಳಾಗಿ 1000 ವಿದ್ಯಾಥಿರ್ಗಳು ಭಾಗವಹಿಸಿದ್ದರು. ಜಯಶಾಲಿಗಳಾದ ವಿದ್ಯಾಥಿರ್ಗಳಿಗೆ ಬಹುಮಾನ ವಿತರಿಸಲಾಯಿತು.

ಹ್ಯಾಕಥಾನ್ : ಪ್ರಥಮ ಬಹುಮಾನ ಆದಿತ್ಯಾ ಎಸ್ , ಹಷಿರ್ತಾ ಬಿ, ರೋಹಿತ ಬಿ. ಮತ್ತು ಮಣಿಕಂಠ ಜಿ. ದ್ವೀತಿಯ ಬಹುಮಾನ ಸುಯೋಗ ಎನ್, ಗಣೇಶ ಜಿ, ಬಸವರಾಜ ಪಿ. ಮತ್ತು ಸಿದ್ದರಾಮಯ್ಯ ಟಿ. ಕೋಡಿಂಗ್: ಪ್ರಥಮ ಬಹುಮಾನ ಅನುಶಾ ಮತ್ತು ಮಂಜುನಾಥ ಜಿ. ದ್ವೀತಿಯ ಬಹುಮಾನ ಸಂಜನಾ ಮತ್ತು ಭಾಗ್ಯಶ್ರೀ, ಡಿಸೈನಿಂಗ್ : ಪ್ರಥಮ ಬಹುಮಾನ ಅನುಶಾ ಕೆ, ಮತ್ತು ಈಶ್ವರಿ ಎಸ್.

ದ್ವೀತಿಯ ಬಹುಮಾನ ಕೀತಿರ್ ಪಿ, ಮತ್ತು ಕುಮುದಿನಿ ಎಸ್. ಗೇಮಿಂಗ್ : ಪ್ರಥಮ ಬಹುಮಾನ ತೇಜಸ ಪಿ, ಮತ್ತು ಡಿ. ಸಂಜಯ. ದ್ವೀತಿಯ ಬಹುಮಾನ ಸೈಯದ್ ಎ ಮತ್ತು ಶಂಕರಗೌಡ. ಕಮ್ಯೂನಿಕೇಶನ್ : ಪ್ರಥಮ ಬಹುಮಾನ ಈಶಾ ಟಿ. ಮತ್ತು ಸಂಜನಾ ಬಿ. ದ್ವೀತಿಯ ಬಹುಮಾನ ಪೂಜಾ ಪಿ. ಮತ್ತು ನೀತು ಎಸ್.

ಕಟೆಂಟ್ ಕ್ರಿಯೇಶನ್ : ಪ್ರಥಮ ಬಹುಮಾನ ಪ್ರೇಮ ಮತ್ತು ವಿಶ್ವಾಸ. ದ್ವೀತಿಯ ಬಹುಮಾನ ಇಜಾನಖಾನ ಜಿ. ಮತ್ತು ಸೊಹೀಲ ಎಂ. ವೀರಾಗ್ರಣಿ ಪ್ರಶಸ್ತಿಯನ್ನು ಸಿಮ್ಯಾಂಟಿಕ್ ಸ್ಟ್ರೀಮ್ ತಂಡ ಪಡೆದುಕೊಂಡಿತು.

ಐಶ್ವರ್ಯಾ ಪಿ. ಸ್ವಾಗತಿಸಿದರು. ಪ್ರೊ. ಅತಾ ಸಿ.ಎಸ್. ಇನ್ ಹೌಸ್ ಫೆಸ್ಟ್ ವರದಿ ನೀಡಿದರು, ವೈಷ್ಣವಿ ಮತ್ತು ವೈಶಾಲಿ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸಾರಾ ಬಿ. ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀರಾ ವಂದಿಸಿದರು.
ಸಂಯೋಜಕಿ ಪ್ರೊ. ಶೋಭಾ ಜಿ. ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net