ಚರ್ಚ್ ಅಭಿವೃದ್ಧಿಗೆ ಶ್ರಮಿಸುತ್ತೇನೆ

25-kgl-1.,
Published on


ಚಾಮರಾಜನಗರ : ಕ್ರಿಸ್‌ಮಸ್ ಹಿನ್ನೆಲೆಯಲ್ಲಿ ಸೋಮವಾರ ಪಟ್ಟಣದಲ್ಲಿರುವ ವಿವಿಧ ಕ್ರೈಸ್ತ ದೇವಾಲಯಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿ ಭೇಟಿ ನೀಡಿ ಶುಭಾಶಯ ಕೋರಿದರು. ಸೆವೆಂತ್ ಡೇ ಆಡ್ವೆಂಟಿಸ್ಟ್ ಚರ್ಚ್, ಸಿಎಸ್‌ಐ ಚರ್ಚ್, ಬೇಥಲ್ ಲೂಥರನ್ ಚರ್ಚ್, ಸಂತ ಫ್ರಾನ್ಸಿಸ್ ಚರ್ಚ್, ಜಕ್ಕಳಿಯ ದೇವಮಾತಾ ಚೆರ್ಚ್‌ಗೆ ಭೇಟಿ ನೀಡಿದರು.


ಸಿದ್ದಯ್ಯನಪುರ ಸಮೀಪವಿರುವ ಅರುಣೋದಯ ಚರ್ಚ್‌ನಲ್ಲಿ ಮಾತನಾಡಿದ ಶಾಸಕರು, ಚುನಾವಣೆ ವೇಳೆ ಅರುಣೋದಯ ಚರ್ಚ್‌ಗೆ ಭೇಟಿ ನೀಡಿದ್ದೆ. ದೇವರನ್ನು ಮನಸ್ಸಿನಲ್ಲಿ ನೆನೆದು ಶಾಸಕನಾಗಿ ಸೇವೆ ಮಾಡಲು ಅವಕಾಶ ಕೊಡುವಂತೆ ನಿವೇದನೆ ಮಾಡಿಕೊಂಡಿದ್ದೆ. ಅಂತೆಯೆ, ಯೇಸು ಆಶೀರ್ವಾದದಿಂದ ಅತ್ಯಧಿಕ ಮತದಿಂದ ಗೆಲುವು ಸಾಧಿಸಿದ್ದೇನೆ. ಅರುಣೋದಯ ಚರ್ಚ್ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುತ್ತೇನೆ ಎಂದರು.

ಅರುಣೋದಯ ಚರ್ಚ್ ಫಾದರ್ ವಿನ್ಸೆಂಟ್ ಅಮಲ್ ದಾಸ್, ನಗರಸಭೆ ಸದಸ್ಯ ಶಾಂತರಾಜು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಜೆ.ಸಿ ಕಿರಣ್, ನಗರಸಭಾ ಮಾಜಿ ಅಧ್ಯಕ್ಷ ಜಿ.ಸೆಲ್ವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಕಾರ್ಯದರ್ಶಿ ರವಿ ಬಸ್ತೀಪುರ, ಮುಖಂಡರಾದ ಮಂಜುನಾಥ್, ರಾಘವೇಂದ್ರ, ಜಯಮೇರಿ, ಕೊಪ್ಪಾಳಿ ಮಹದೇವ, ಸ್ವಾಮಿ ನಂಜಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net