

ಕೊಲ್ಹಾರ: ಪಟ್ಟಣದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಶಿವಾನಂದ ಪಾಟೀಲ ಭೂಮಿಪೂಜೆ ನೆರವೇರಿಸಿದರು.
ಪಟ್ಟಣದ ವಾರ್ಡ್ 1,2 ಮತ್ತು 3 ರಲ್ಲಿ ರಸ್ತೆಗಳ ಡಾಂಬರೀಕರಣ, ಚರಂಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಸಚಿವರು, ಅಭಿವೃದ್ಧಿಗೆ ನಾನು ಸದಾ ಬದ್ಧ. ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿರುವೆ. ಮುಂದೆಯೂ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ದಿಗಂಬರಮಠದ ಕಲ್ಲಿನಾಥ ದೇವರು ಸಾನ್ನಿಧ್ಯ ವಹಿಸಿದ್ದರು. ಪಡದಯ್ಯ ಹಿರೇಮಠ, ಕೆಬಿಜೆನ್ನೆಲ್ ಕಾರ್ಯನಿರ್ವಾಹಕ ಅಭಿಯಂತರ ಎಸ್.ಎಸ್.ಶೀಲವಂತ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉಮೇಶ ಚಲವಾದಿ, ಸಿ.ಎಸ್.ಗಿಡ್ಡಪ್ಪಗೋಳ, ಎಸ್.ಬಿ ಪತಂಗಿ, ಆರ್ ಬಿ.ಪಕಾಲಿ, ಬಿ.ಸಿ. ಬಾಲಗೊಂಡ, ಅಶೋಕ ಜಿಡ್ಡಿಬಾಗಿಲ, ಶ್ರೀಶೈಲ ಅಥಣಿ, ದಶರಥ ಈಟಿ, ಎಂ.ಆರ್. ಕಲಾದಗಿ, ಯಮನೂರಿ ಮಾಕಾಳಿ, ಶರಣು ಬಾಲಗೊಂಡ, ಜಾವೀದ್ ಬೀಳಗಿ, ಮಲ್ಲನಗೌಡ ಪಾಟೀಲ, ಮುದುಕಪ್ಪ ಪೂಜಾರಿ ಉಪಸ್ಥಿತರಿದ್ದರು.