ಬಳ್ಳಾರಿ : ವಿಶ್ವಕರ್ಮ ಸಮುದಾಯ ಹಾಗೂ ಕೆಳ ವರ್ಗದ ಜನರ ಏಳಿಗೆಗೆ ಶ್ರಮಿಸುವೆ ಎಂದು ರಾಜ್ಯ ವಿಶ್ವಕರ್ಮ ಆಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಸುಜ್ಞಾನ ಮೂರ್ತಿ ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಶ್ವಕರ್ಮ ಸಮುದಾಯ ಜನರ ಜೀವನ ಕಷ್ಟಕರವಾಗಿದೆ. ನಿಗಮ ಹಾಗೂ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಅರ್ಹ ಫಲಾನುವಿಗಳಿಗೆ ದೊರೆಯುವಂತೆ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ವಿಶ್ವಕರ್ಮ ಅಭಿವೃದ್ಧಿ ನಿಗಮದಕ್ಕೆ ಅನುದಾನ ಕೊರತೆಯಿದೆ. ಅದಕ್ಕಾಗಿ ರಾಜ್ಯದಿಂದ ವಿಶ್ವಕರ್ಮ ನಿಯೋಗವು ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ, ಅನುದಾನ ಒದಗಿಸುವಂತೆ ಮನವಿ ಸಲ್ಲಿಸಲಾಗುವುದು ಎಂದರು. ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮುಖಂಡರಾದ ರಘು, ನಾಗರಾಜ್, ಎಲ್.ಮಾರೆಣ್ಣ, ಚಂದ್ರು, ಚಿದಾನಂದಪ್ಪ, ಗೋಪಿಕೃಷ್ಣ ಇದ್ದರು.