

ಸೂಲಿಬೆಲೆ : ಹೊಸಕೋಟೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಗಳ ಪ್ರತಿನಿಧಿಯಾಗಿ ಸಹಕಾರ ಸಂಗಳ ಶ್ರೇಯೊಭಿವೃದ್ಧಿಗೆ ಶ್ರಮಿಸುವೆ ಎಂದು ಬೆಂಗಳೂರು ಹಾಲು ಒಕ್ಕೂಟದ ನೂತನ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.
ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯಲ್ಲಿ ಜೇನುಗೂಡು ರೂರಲ್ ಡೆವಲ್ಪಮೆಂಟ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ಹಾಗೂ ನೂರಾರು ಕಾಂಗ್ರೆಸ್ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಗಳ ಅಭಿವೃದ್ಧಿಗೆ ನೂತನ ಯೋಜನೆ ರೂಪಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ಶಾಸಕ ಶರತ್ಬಚ್ಚೇಗೌಡರ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಮಾಜಿ ಪಶುಸಂಗೋಪನ ಸಚಿವ ಬಿ.ಎನ್.ಬಚ್ಚೇಗೌಡ ಅವರು ತಾಲೂಕಿಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಹಾದಿಯಲ್ಲಿ ಸೇವೆ ಮುಂದುವರಿಸುತ್ತೇನೆ ಎಂದರು.ಜೇನುಗೂಡು ರೂರಲ್ ಡೆವಲ್ಪಮೆಂಟ್ ಆ್ಯಂಡ್ ಕಲ್ಚರಲ್ ಟ್ರಸ್ಟಿನ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ನಿರ್ದೇಶಕರಾದ ಸೈಯದ್ ಮಹಬೂಬ್, ಎಸ್.ಕೆ.ವಸಂತಕುಮಾರ್, ತರಬಹಳ್ಳಿ ಹರೀಶ್, ಅತ್ತಿಬೆಲೆ ಮಂಜುನಾಥ್, ಸಹಕಾರ ಬ್ಯಾಂಕ್ ಮಾಜಿ ನಿರ್ದೇಶಕಿ ಕೆ.ವಿ.ವಿಜಯಲ್ಮ, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್, ರಮಿತ್ಕುಮಾರ್, ವೀಣಾ, ಮುನಿಶಾಮಪ್ಪ, ಬೆಂಡಿಗಾನಹಳ್ಳಿ ಡೇರಿ ಕಾರ್ಯದರ್ಶಿ ಲೋಕೇಶ್ಬಾಬು, ಸಿದ್ದೇನಹಳ್ಳಿ ರಮೇಶ್, ಬೆಟ್ಟಹಳ್ಳಿ ನಾಗೇಶ್ಗೌಡ, ಮಂಜುನಾಥ್, ತಾಲೂಕಿನ ಹಾಲು ಡೇರಿ ಅಧ್ಯಕ್ಷರು, ಕಾರ್ಯದರ್ಶಿಗಳು, ಬಮುಲ್ ಅಧಿಕಾರಿ ವರ್ಗ ಇದ್ದರು.
ಶಾಸಕ ಶರತ್ ಬಚ್ಚೇಗೌಡರ ಸಹಕಾರದಲ್ಲಿ 138 ಮತಗಳನ್ನು ಪಡೆದು ಜಯಶಾಲಿ ಯಾಗಿದ್ದು ಮತ ನೀಡಿದ ಎಲ್ಲರಿಗೂ ಚಿರಋಣಿಯಾಗಿರುವೆೆ. | ಬಿ.ವಿ.ಸತೀಶಗೌಡ, ನೂತನ ನಿರ್ದೇಶಕ ಬಮುಲ್ ಸುದೀರ್ 35 ವರ್ಷಗಳಿಂದ ಸಹಕಾರ ರಂಗದಲ್ಲಿರುವ ಬಿ.ವಿ.ಸತೀಶಗೌಡರಿಗೆ ಸಹಕಾರ ಸಂದವರಿಂದ ಆಶೀರ್ವಾದ ದೊರೆತಿದ್ದು, ಡೇರಿಗಳು ಹಾಗೂ ಪಶುಪಾಲನೆ ಅವಲಂಬಿತ ಕುಟುಂಬಗಳಿಗೆ ಅನುಕೂಲವಾಗುವ ಸೇವಾ ಕಾರ್ಯಕ್ರಮಗಳು ಜಾರಿಯಾಗಬೇಕು. | ಬಿಎನ್.ಬಚ್ಚೇಗೌಡ, ಮಾಜಿ ಸಂಸದ