ತಾಲೂಕ ಕಚೇರಿ ಲಿಫ್ಟ್ ಸರಿಪಡಿಸಲ ನಾನೇ ಹಣ ನೀಡುತ್ತೇನೆ: ಸಿ.ಎನ್. ಮಂಜೇಗೌಡ

cn manjegowda
Published on

ಮೈಸೂರು: ಮೈಸೂರು ತಾಲೂಕ ಕಚೇರಿ ಲಿಫ್ಟ್ ಸರಿಪಡಿಸಲು ನಾನೇ ಹಣ ನೀಡುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಎನ್. ಮಂಜೇಗೌಡ ತಿಳಿಸಿದರು.


ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೆಳೆ ಹಾನಿ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಮೈಸೂರು ತಾಲೂಕು ಕಚೇರಿಯಲ್ಲಿ ಲಿಫ್ಟ್ ಕೆಟ್ಟಿದ್ದು, ಹಿರಿಯ ನಾಗರಿಕರು, ಅಂಗವಿಕಲರು ಮೊದಲನೇ ಮಹಡಿಗೆ ಹೋಗಲು ಕಷ್ಟಪಡುತ್ತಿದ್ದಾರೆ. ದುರಸ್ತಿಪಡಿಸಲು ಇನ್ನೆಷ್ಟು ದಿನಗಳು ಬೇಕು ಎಂದು ಪ್ರಶ್ನಿಸಿದರು.


ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಹಸಿಲ್ದಾರ್ ಪ್ರತಿಕ್ರಿಯಿಸಿದರು. ಎಷ್ಟು ಅನುದಾನ ಬೇಕಾಗುತ್ತದೆ ಎಂದು ಕೇಳಿದ ಸಿ.ಎನ್. ಮಂಜೇಗೌಡ ಅವರು ತಮ್ಮ ಅನುದಾನದಿಂದ 5 ಲಕ್ಷ ರೂ. ಕೊಡುತ್ತೇನೆ, ಶೀಘ್ರ ಅಭಿವೃದ್ಧಿಪಡಿಸಿ ಎಂದು ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net