ನಾನು ರಾಜಕೀಯಕ್ಕೆ ಬರಲ್ಲ: ನಟ ಶಿವರಾಜ್‌ಕುಮಾರ್

actor shivaraj kumar
ನಟ ಶಿವರಾಜ್‌ಕುಮಾರ್
Published on

ಶಿವಮೊಗ್ಗ: ನಾನು ಸಿನಿಮಾ ರಂಗದಲ್ಲಿ ಮುಂದುವರಿಯುತ್ತೇನೆ, ಯಾವ ಕಾರಣಕ್ಕೂ ರಾಜಕೀಯಕ್ಕೆ ಬರುವುದಿಲ್ಲ ಎಂದು ನಟ ಶಿವರಾಜ್‌ಕುಮಾರ್ ಪುನರುಚ್ಚರಿಸಿದರು.

ನಗರದಲ್ಲಿ ಶನಿವಾರ ಮಾತನಾಡಿದ ಅವರು, ಪತ್ನಿ ಗೀತಾ ಅವರನ್ನು ಸಂಸದರನ್ನಾಗಿ ಮಾಡಲು ನನಗೆ ಆಸೆ ಇದೆ. ಕಾಂಗ್ರೆಸ್ ಪಕ್ಷ ಅವರಿಗೆ ಟಿಕೆಟ್ ಕೊಟ್ಟರೆ ಗೆಲ್ಲಿಸಿಕೊಂಡು ಬರುವ ಪ್ರಯತ್ನ ಮಾಡಲಾಗುವುದು. ಸಮಯ ಹೊಂದಾಣಿಕೆ ಮಾಡಿಕೊಂಡು ಪ್ರಚಾರಕ್ಕೂ ಬರುತ್ತೇನೆ ಎಂದು ಹೇಳಿದರು.
ನಾನು ರಾಜಕೀಯಕ್ಕೆ ಬರುವುದಿಲ್ಲ ಎಂದು ಈಗಾಗಲೇ ಡಿಸಿಎಂ ಡಿ.ಕೆ.ಶಿವಕುಮಾರ್ ಬಳಿಯೇ ಹೇಳಿದ್ದೇನೆ. ರಾಜಕೀಯದ ಬಗ್ಗೆ ನನಗೆ ಆಸಕ್ತಿ ಇಲ್ಲ. ರಾಜಕೀಯದಲ್ಲಿದ್ದುಕೊಂಡು ಜನಸೇವೆ ಮಾಡುವುದು ಗೊತ್ತಿಲ್ಲ. ಜನ ಕಷ್ಟ ಅಂತ ಬಂದರೆ ಹಣ ಕೊಟ್ಟು ಕಳಿಸುವೆ. ಆದರೆ ರಾಜಕಾರಣ ಗೊತ್ತಿಲ್ಲ. ಆದರೆ ಗೀತಾ ಅದೇ ಕುಟುಂಬದಿಂದ ಬಂದವಳು. ರಾಜಕಾರಣ ಮಾಡುವುದು ರಕ್ತಗತವಾಗಿಯೇ ಬಂದಿದೆ. ಅವರು ಎಂಪಿ ಆಗಿ ಆಯ್ಕೆಯಾದರೆ ಸಂತೋಷ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net