

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವುದಕ್ಕಾಗಿ ಮಠ ಬಿಡುತ್ತೇನೆಯೇ ಹೊರತು ಹೋರಾಟ ಬಿಡುವುದಿಲ್ಲ ಎಂದು ಕೂಡಲಸಂಗದ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಲ್ಲಿನ ಐಶ್ವರ್ಯ ನಗರದ ರಾಣಿ ಚೆನ್ನಮ್ಮ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಪಂಚಮಸಾಲಿ ವಕೀಲರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2ಎ ಮೀಸಲಾತಿಗಾಗಿ 6 ಹಂತದ ಹೋರಾಟಗಳು ಮುಗಿದಿದ್ದು, 7ನೇ ಹಂತದ ಹೋರಾಟ ವಕೀಲರ ಮುಂದಾಳತ್ವದಲ್ಲಿ ಕೈಗೊಳ್ಳಲಾಗುತ್ತಿದೆ. ಕಾನೂನಿನ ಮೂಲಕ ಹೋರಾಟ ಕೈಗೊಳ್ಳಲಾಗುವುದು. ಹೀಗಾಗಿ ವಕೀಲರ ಸಭೆ ನಡೆಸುತ್ತಿರುವುದಾಗಿ ತಿಳಿಸಿದರು.
ನ್ಯಾಯವಾದಿಗಳಾದ ಸಂಗಮೇಶ ಡೋಂಗರಗಾಂವ, ಸಂಗನಗೌಡ ಪಾಟೀಲ ಹೇಗಡ್ಯಾಳ, ಎಸ್.ಎಸ್. ಮೂಡಲಗಿ, ಜಿ.ಟಿ. ಕೋಳೂರ, ಭುವನೇಶ್ವರಿ ಅಲಗೊಂಡ, ಸಿದ್ದನಗೌಡ ಪೊಲೀಸ್ಪಾಟೀಲ, ಎಸ್.ಬಿ. ಪಾಟೀಲ (ಗುಂದಗಿ,), ದಾನಪ್ಪಗೌಡ ಚನ್ನಗೊಂಡ, ಬಿ.ಜಿ. ನೆಲ್ಲಗಿ, ಎಂ.ಎಸ್. ಪಾಟೀಲ ಕೋರಳ್ಳಿ, ಬಿ.ಬಿ. ಬಿರಾದಾರ ಜೇವೂರ, ವಿ.ಎನ್. ಪಾಟೀಲ, ಆರ್.ಎಸ್. ಹಳ್ಳಿ, ವಿದ್ಯಾರಾಣಿ ತುಂಗಳ, ರವಿ ಖಾನಾಪೂರ, ಶಿವರಾಯಗೌಡ ಬಿರಾದಾರ, ಬಸವರಾಜ ಸಾವಳಗಿ, ಈರಣ್ಣ ಗಾಳಿ, ವಿಜಯ ಪಾಟೀಲ, ಬಾಬು ಹಿಪ್ಪರಗಿ, ವಿಕಾಸ ಬಿರಾದಾರ, ಕಲಾ ಉಮರಾಣಿ, ಶಾಮಲಾ ಗೋಲಾಯಿ, ಎಂ.ಎಸ್. ಅಂದೊಡಗಿ, ಬಿ.ವಿ. ಬಿರಾದಾರ ಇಂಡಿ, ದಾನೇಶ ಅವಟಿ, ಸಮಾಜದ ಹಿರಿಯರಾದ ಎಂ.ಎಸ್. ರುದ್ರಗೌಡರ, ಶ್ರೀಶೈಲ ಬುಕ್ಕಣ್ಣಿ, ಸುನೀಲಗೌಡ ಸೊಲಾಪೂರ, ಉಮಾ ಪಾಟೀಲ ತಮ್ಮ ತಮ್ಮ ಅನಿಸಿಕೆ ಹಂಚಿಕೊಂಡರು.
ವಕೀಲರ ಸಲಹಾ ಸಮಿತಿ ಸದಸ್ಯರಾಗಿ ಹಿರಿಯ ನ್ಯಾಯವಾದಿಗಳಾದ ಸಂಗಮೇಶ ಡೊಂಗರಗಾಂವ್, ಎಸ್.ಬಿ. ಪಾಟೀಲ ಹೆಗಡಿಹಾಳ, ಜಿ.ಬಿ. ಕೋಳೂರ, ಎಸ್.ಎಸ್.ಮೂಡಲಗಿ, ಬಿ.ಜಿ. ನೆಲ್ಲಗಿ ಸಿಂದಗಿ, ಬಿ.ಬಿ. ಬಿರಾದಾರ ಇಂಡಿ, ಭುವನೇಶ್ವರಿ ಅಲಗೋಂಡ, ಮಾಧ್ಯಮವಕ್ತಾರರನ್ನಾಗಿ ದಾನೇಶ ಅವಟಿ ಇವರನ್ನು ಆಯ್ಕೆ ಮಾಡಲಾಯಿತು.
ನ್ಯಾಯವಾದಿ ಶ್ರೀಶೈಲ ಮುಳಜಿ ಸ್ವಾಗತಿಸಿದರು. ಭುವನೇಶ್ವರಿ ಅಲಗೊಂಡ ನಿರೂಪಿಸಿದರು. ಸಿದ್ದನಗೌಡ ಪೊಲೀಸ್ ಪಾಟೀಲ ವಂದಿಸಿದರು.