

ರಾಯಚೂರು ಬೆಂಗಳೂರಿನಲ್ಲಿ ಕಾಲ್ತುಳಿತದಿಂದ ಆದ ಘಟನೆಯನ್ನು ಎಂಎಲ್ಸಿ ಸಿಟಿ ರವಿ ಸರ್ಕಾರಿ ಪ್ರಾಯೋಜಿತದಿಂದ ಕೊಲೆ ಮಾಡಲಾಗಿದೆಂದು ಬಿಂಬಿಸುತ್ತಿದ್ದು, ಮೃತರ ಕುಟುಂಬಗಳು ನೋವಿನಲ್ಲಿದ್ದಾಗ ರಾಜಕಾರಣ ಮಾಡುವುದು ಸರಿಯಲ್ಲ, ಎರಡು ದಿನಗಳ ನಂತರ ಸಿಟಿ ರವಿ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಕೌಂಟರ್ ಕೊಡುವೆ ಎಂದು ಚಿಕ್ಕಬಳ್ಳಾಪೂರ ಶಾಸಕ ಪ್ರದೀಪ್ ಈಶ್ವರ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಜಯಗಳಿಸಿದ ಹಿನ್ನಲೆಯಲ್ಲಿ ಆರ್‌ಸಿಬಿ ತಂಡ ಬೆಂಗಳೂರಿಗೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಸ್ವಾಗತಿ ಖುಷಿಯಲ್ಲಿ ಪ್ರತಿಯೊಬ್ಬರೂ ಇದ್ದರು. ಅದರಂತೆ ರಾಜ್ಯ ಸರ್ಕಾರದಿಂದಲೂ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ನಿರೀಕ್ಷೆಗೂ ಮೀರಿ ಆರ್‌ಸಿಬಿ ಅಭಿಮಾನಿಗಳು ಆಗಮಿಸಿದ್ದರಿಂದ ಈ ಘಟನೆಯಾಗಿದೆ.
ಈಗಾಗಲೇ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದು, ಗಾಯಗೊಂಡವರಿಗೂ ಚಿಕಿತ್ಸೆಯನ್ನೂ ನೀಡಲಾಗುತ್ತಿದೆ. ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳು ನೋವಿನಲ್ಲಿರುವ ಸಂದರ್ಭದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ರೋಡ್ ಶೋ ಬಂದ್ ಮಾಡಿತ್ತು. ದುರುದೃಷ್ಟಕರವಾಗಿ ಈ
ಘಟನೆ ನಡೆದಿದೆ.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ.ಶಿವಕುಮಾರ ಬಗ್ಗೆ ಮಾಡಿದ ಆರೋಪಕ್ಕೆ ನಾನು ಮಾತನಾಡಲ್ಲ. ಈ ಘಟನೆ ಸೂಕ್ಷ್ಮವಿದೆ. ಎಲ್ಲರೂ ಶೋಕ ಸಾಗರದಲ್ಲಿರುವುದರಿಂದ ನಾನು ಈ ಬಗ್ಗೆ ಕಮೆಂಟ್ ಮಾಡಲ್ಲ ಎಂದರು.