28 ಸ್ಥಾನ ಗೆದ್ದು ಮೋದಿ ಬಳಿ ನೀರು ಕೇಳುತ್ತೇನೆ

IMG-20240421-WA0086
ಹೊಳೆ ನರಸೀಪುರ ತಾಲೂಕಿನ ನಗರ ಹಳ್ಳಿ ಗ್ರಾಮದಲ್ಲಿ ಎಚ್.ಡಿ. ದೇವೇಗೌಡ ತೆರೆದ ವಾಹನದಲ್ಲಿ ಮತಪ್ರಚಾರ ನಡೆಸಿದರು. ಎ.ಮಂಜು, ಸೂರಜ್ ರೇವಣ್ಣ, ಕೆ.ಎಂ. ಶಿವಕುಮಾರ್, ಸುನಿಲ್ ಇದ್ದರು.
Published on

ಹೊಳೆನರಸೀಪುರ : ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಭಾನುವಾರ ಭರ್ಜರಿ ಪ್ರಚಾರ ನಡೆಸಿದರು.
ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಕಡುವಿನಹೊಸಳ್ಳಿ, ಶ್ರವಣೂರು, ನಗರನಹಳ್ಳಿ ಗ್ರಾಮದಲ್ಲಿ ಮತಯಾಚನೆ ಮಾಡಿದ ದೇವೇಗೌಡರಿಗೆ ಜೆಸಿಬಿ ಮೇಲೆ ನಿಂತು ನಗರನಹಳ್ಳಿ ಗ್ರಾಮಸ್ಥರು ಪುಷ್ಪಾರ್ಚನೆ ಮಾಡಿ ಗೌರವಿಸಿದರು.
ನಾನು ಪ್ರಜ್ವಲ್‌ರೇವಣ್ಣ ಪರ ಮತಯಾಚನೆ ಮಾಡಲು ಬಂದಿಲ್ಲ. ನಾನೇನು ಮತ್ತೆ ಮುಖ್ಯಮಂತ್ರಿ ಆಗಲ್ಲ. ಈ ಗ್ರಾಮಗಳಿಗೆ ರಂಗೇನಹಳ್ಳಿ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಬೇಕಿದೆ. ಆದರೆ ತಮಿಳುನಾಡು ಸರ್ಕಾರ ಬಿಡುತ್ತಿಲ್ಲ. ಈ ಸಮಸ್ಯೆ ಬಗೆಹರಿಸಬೇಕಾದರೆ ರಾಜ್ಯದಲ್ಲಿ 28 ಕ್ಕೆ 28 ಸ್ಥಾನ ಗೆದ್ದು ಮೋದಿ ಬಳಿ ನೀರು ಕೇಳುತ್ತೇನೆ. ಈ ಮಾತನ್ನು ನಿನ್ನೆ ಮೋದಿಯವರ ಪಕ್ಕದಲ್ಲಿ ಕುಳಿತು ಹೇಳಿದ್ದೇನೆ ಎಂದು ನುಡಿದರು.

ಇನ್ನೂ ಎರಡು ವರ್ಷ ರಾಜ್ಯಸಭೆಯಲ್ಲಿ ಇರುತ್ತೇನೆ. ಅಲ್ಲಿಯವರೆಗೂ ರಾಜ್ಯದ ನೀರಾವರಿ ಯೋಜನೆಗಳಿಗಾಗಿ ಹೋರಾಡುತ್ತೇನೆ. ಎಲ್ಲ ಕಡೆ ಹೋಗ್ತೀನಿ ಜೆಡಿಎಸ್-ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡ್ತಿನಿ, ನೀವು ನಮ್ಮ ಕೈಹಿಡಿಯರಿ, ನೀರಾವರಿ ಯೋಜನೆ ಮಾಡ್ತಿನಿ, ಆಗ ನೆಮ್ಮದಿಯಿಂದ ಕೊನೆಯುಸಿರೆಳೆಯಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net