‘ಯಾವಾಗ ಉತ್ತರ ಕೊಡಬೇಕು ಅಲ್ಲಿ ಕೊಡುತ್ತೇನೆ’: ಬಿ.ವೈ.ವಿಜಯೇಂದ್ರ

BJP State President B.Y. Vijayendra
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
Published on

ಮೈಸೂರು: ಪ್ರತಾಪ್‌ಸಿಂಹ ಅವರಿಗೆ ವಿಜಯೇಂದ್ರ ತಪ್ಪಿಸಿದರು ಅಂತ ಚರ್ಚೆ ಆಯ್ತು. ಆದರೆ ಟಿಕೆಟ್ ಕೊಡುವುದನ್ನು ರಾಷ್ಟ್ರೀಯ ನಾಯಕರು ನಿರ್ಧರಿಸುತ್ತಾರೆ. ನಾನು ಯಾರಿಗೆ ಯಾವಾಗ ಉತ್ತರ ಕೊಡಬೇಕು, ಎಲ್ಲಿ ಕೊಡಬೇಕು ಅಲ್ಲಿ ಕೊಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ನಾನು ರಾಜ್ಯಾಧ್ಯಕ್ಷನಾದರೂ ಅಭ್ಯರ್ಥಿ ಆಯ್ಕೆಯನ್ನು ರಾಷ್ಟ್ರೀಯ ಅಧ್ಯಕ್ಷರೇ ತೀರ್ಮಾನಿಸುವುದು. ಈ ವಿಚಾರದಲ್ಲಿ ಹಲವರು ಏನೇನೋ ಮಾತನಾಡಿದ್ದಾರೆ. ಅದನ್ನೆಲ್ಲಾ ಎಲ್ಲಿ ಹೇಳಬೇಕು ಅಲ್ಲಿ ಮಾತನಾಡುತ್ತೇನೆ ಎಂದರು.
ಯದುವೀರ್ ಅವರ ತಂದೆ ಕೂಡ ಜನಾನುರಾಗಿ ಕೆಲಸ ಮಾಡಿದ್ದಾರೆ. ಯದುವೀರ್ ಕೂಡ ಅದೇ ಸಿಂಪ್ಲಿಸಿಟಿಯಲ್ಲಿ ಇದ್ದಾರೆ. ರಾಜ್ಯದ ಜನ ಅದನ್ನು ಗಮನಿಸಿದ್ದಾರೆ. ಮೈಸೂರನ್ನು ನನ್ನ ಹೃದಯದಲ್ಕಿ ಇಟ್ಟುಕೊಂಡಿದ್ದು, ಮೈಸೂರಿಗೆ ಏನೂ ಮಾಡುತ್ತೇನೆ ಅಂತ ಮುಂದೆ ಕಾಲವೇ ಹೇಳುತ್ತದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net