ಅಮಿತ್ ಷಾ ದೊಡ್ಡ ಗಿಫ್ಟ್ ನೀಡುವುದಾಗಿ ಹೇಳಿದಾಗ ಸೋತ್ತಿದ್ದೆ, ಈ ಬಾರಿಯೂ ಆ ರೀತಿ ಹೇಳಿದ್ದರೆ ಸಮಸ್ಯೆ ಆಗುತಿತ್ತೇನೋ : ನೂತನ ಸಂಸದ ವಿ. ಸೋಮಣ್ಣ

V Somanna
Published on

ಮೈಸೂರು: ಕಳೆದ ಬಾರಿ ವರುಣ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ನಾನು ಸ್ಪರ್ಧಿಸಿದ ಸಂದರ್ಭ ‘ಸೋಮಣ್ಣ ಗೆಲುವು ಸಾಧಿಸಿದರೆ ಅವರಿಗೆ ದೊಡ್ಡ ಗಿಫ್ಟ್ ಕಾದಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದರು. ಆದರೆ, ಆ ಚುನಾವಣೆಯಲ್ಲಿ ನಾನು ಸೋಲು ಅನುಭವಿಸಿದೆ. ಆದರೆ, ಈ ಬಾರಿ ಅಮಿತ್ ಷಾ ಅಂತಹ ಮಾತು ಆಡಲಿಲ್ಲ. ಒಂದುವೇಳೆ ಈ ಬಾರಿಯೂ ಸೋಮಣ್ಣಗೆ ದೊಡ್ಡ ಗಿಫ್ಟ್ ಕಾದಿದೆ ಅಂದಿದ್ದರೆ ದೊಡ್ಡ ಸಮಸ್ಯೆಯಾಗುತ್ತಿತ್ತೇನೋ ಬಿಡಿ ಎಂದು ನೂತನ ಸಂಸದ ವಿ. ಸೋಮಣ್ಣ ಹಾಸ್ಯ ಚಟಾಕಿ ಹಾರಿಸಿದರು.

ನಗರದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ನೀಡುವುದು ಹೈ ಕಮಾಂಡ್‌ಗೆ ಬಿಟ್ಟ ವಿಚಾರ. ಇಂದಿನ ಪರಿಸ್ಥಿತಿಯನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಇಂತಹ ಪರಿಸ್ಥಿತಿಯಲ್ಲೂ ನನಗೆ ಒಂದು ವೇಳೆ ಅವಕಾಶ ಸಿಕ್ಕರೆ ಇನ್ನೂ ಹೆಚ್ಚಿನ ಕೆಲಸ ಆಗುತ್ತದೆ ಅಷ್ಟೇ. ಅವಕಾಶ ಸಿಗುವ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ನಾನು ನಾಳೆ ದೆಹಲಿಗೆ ತೆರಳುತ್ತೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net