ನನಗೆ ಯಾರ ಮೇಲೂ ದ್ವೇಷ, ಸೇಡು ಇಲ್ಲ

7ugl1
Published on

ಉಗರಗೋಳ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿ.19ರಂದು ನಡೆದ ಅಹಿತಕರ ಘಟನೆಯ ಬಗ್ಗೆ ನಾನು ಯಾರ ಮೇಲೂ ಆರೋಪ ಹೊರಿಸುವುದಿಲ್ಲ. ಯಾರ ಮೇಲೂ ಸೇಡು ಇಲ್ಲ, ದುರುದ್ದೇಶವೂ ಇಲ್ಲ. ಎಲ್ಲವನ್ನೂ ಯಲ್ಲಮ್ಮ ದೇವಿ ಬಳಿ ನಿವೇದಿಸಿಕೊಂಡಿದ್ದೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಸಮೀಪದ ಯಲ್ಲಮ್ಮನ ಗುಡ್ಡಕ್ಕೆ ಶುಕ್ರವಾರ ಭೇಟಿ ನೀಡಿ ಶ್ರೀರೇಣುಕಾ ಯಲ್ಲಮ್ಮ ದೇವಿ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಕ್ರಮ ವಹಿಸಬೇಕು. ಭಕ್ತರಿಗೆ ಸೌಕರ್ಯ ಕಲ್ಪಿಸಬೇಕು. ನಿರಂತರವಾಗಿ ದಾಸೋಹ ನಡೆಯಬೇಕು ಎಂದರು. ಯಲ್ಲಮ್ಮ ದೇವಸ್ಥಾನದ ಪರವಾಗಿ ಬಿಜೆಪಿ ಮುಖಂಡ ವಿರೂಪಾಕ್ಷಿ ಮಾಮನಿ ಸಿ.ಟಿ.ರವಿ ಅವರನ್ನು ಸನ್ಮಾನಿಸಿದರು.

ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾ ಉಪಾಧ್ಯಕ್ಷೆ ರತ್ನಾ ಮಾಮನಿ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ ಪಾಟೀಲ, ಸಂಜಯ ಪಾಟೀಲ, ಕುಮಾರಸ್ವಾಮಿ ತಲ್ಲೂರಮಠ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಡಾ.ನಯನಾ ಭಸ್ಮೆ, ಈರಣ್ಣ ಚಂದರಗಿ, ಸಿದ್ದಯ್ಯ ವಡೆಯರ, ಸೋಮು ಹದ್ಲಿ, ಜಗದೀಶ ಕೌಜಗೇರಿ, ಜಿ.ಎಸ್.ಗಂಗಲ, ಉಗರಗೋಳ ಪೊಲೇಶಿ ಇತರರಿದ್ದರು. ಇದಕ್ಕೂ ಪೂರ್ವ ರತ್ನಾ ಮಾಮನಿ ಅವರ ಮನೆಗೆ ಸಿ.ಟಿ.ರವಿ ದಂಪತಿ ಸಮೇತ ಭೇಟಿ ನೀಡಿ ಸತ್ಕಾರ ಸ್ವೀಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net