ಜನಸೇವೆ ಮಾಡುವ ಹಂಬಲದೊಂದಿಗೆ ಸ್ಪರ್ಧಿಸಿದ್ದೇನೆ

IMG_20240407_165506
ನುಗ್ಗೇಹಳ್ಳಿ ಎಪಿಎಂಸಿ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಪಕ್ಷದ ಅಭ್ಯರ್ಥಿ ಶ್ರೇಯಸ್ ಪಟೇಲ್ ಉದ್ಘಾಟಿಸಿದರು. ಪುಟ್ಟೇಗೌಡ, ಎಂ.ಎ.ಗೋಪಾಲಸ್ವಾಮಿ, ಅನುಪಮಾ ಮಹೇಶ್, ಬಾಗೂರು ಮಂಜೇಗೌಡ, ರಾಮಚಂದ್ರ, ಶಂಕರ್, ರಂಗಸ್ವಾಮಿ, ಎನ್.ಎಸ್.ಪ್ರಕಾಶ್, ಅಶೋಕ್, ಲಕ್ಷ್ಮಣ್, ಶಮ್ಮು ಇದ್ದರು.
Published on

ನುಗ್ಗೇಹಳ್ಳಿ: ನಮ್ಮ ತಾತಂದಿರಾದ ದಿವಂಗತ ಜಿ.ಪುಟ್ಟಸ್ವಾಮಿಗೌಡ ಹಾಗೂ ಎಚ್.ಸಿ.ಶ್ರೀಕಂಠಯ್ಯ ಅವರ ರೀತಿ ಜಿಲ್ಲೆಯ ಅಭಿವೃದ್ಧಿಯೊಂದಿಗೆ ಜನಸೇವೆ ಮಾಡುವ ಹಂಬಲದೊಂದಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಭಾನುವಾರ ತಿಳಿಸಿದರು.

ನುಗ್ಗೇಹಳ್ಳಿ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರ ಅನುಭವಿಸುವ ಆಸೆಯಿಂದ ನಾನು ರಾಜಕೀಯಕ್ಕೆ ಬಂದಿಲ್ಲ. ಪ್ರಾಮಾಣಿಕ ಸೇವೆ ಮಾಡುವ ಉದ್ದೇಶದಿಂದ ಬಂದಿದ್ದೇನೆ. ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳು ಜನತೆಯ ವಿಶ್ವಾಸಕ್ಕೆ ಪಾತ್ರವಾಗಿವೆ. ಹಾಸನ ಲೋಕಸಭಾ ಕ್ಷೇತ್ರದ ಮತದಾರರು ಜಾತ್ಯತೀತವಾಗಿ ನನ್ನನ್ನು ಬೆಂಬಲಿಸಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಕೈ ಬಲಪಡಿಸಿ ನನ್ನನ್ನು ಬಿಡಬೇಡಿ. ರಾಜಕೀಯವಾಗಿ 25 ವರ್ಷದಿಂದ ಕುಗ್ಗಿದ್ದೇನೆ. ನನಗೂ ಶಕ್ತಿ ಕೊಡಿ ಎಂದು ಕೋರಿದರು.

ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಮಾಜಿ ಪ್ರಧಾನಿ ಮೊಮ್ಮಗ ಹಾಗೂ ಶ್ರೇಯಸ್ ಪಟೇಲ್ ಅವರ ಚುನಾವಣೆಯ ಹೋರಾಟವನ್ನು ರಾಜ್ಯ ಹಾಗೂ ದೇಶದ ಪ್ರಧಾನಿ ನೋಡುತ್ತಿರುವುದರಿಂದ ಇದು ಪ್ರತಿಷ್ಠಿತ ಕ್ಷೇತ್ರವಾಗಿದೆ. ಇಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುತ್ತಿದೆ. ತಬ್ಬಲಿ ಮಗನನ್ನು ಪಾರ್ಲಿಮೆಂಟಿಗೆ ಕಳಿಸಲು ಪ್ರತಿಯೊಬ್ಬರೂ ಆಶ್ರಯದಾತರಾಗಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ವಿಜಯಕುಮಾರ್ ಮಾತನಾಡಿ, ನನ್ನ ಅಳಿಯ ಶ್ರೇಯಸ್ ಪಟೇಲ್ ಅವರಿಗೆ ಈ ಬಾರಿ ಆಶೀರ್ವಾದ ಮಾಡಿ. ನಮ್ಮ ಎರಡು ಕುಟುಂಬಗಳಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವೆಲ್ಲ ಒಗ್ಗಟ್ಟಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ನುಗ್ಗೇಹಳ್ಳಿ ಏತ ನೀರಾವರಿ ಯೋಜನೆ ಕಾಲುವೆ ಸಮಸ್ಯೆ ಪೂರ್ಣಗೊಳಿಸಲು ಶ್ರೇಯಸ್ ಪಟೇಲ್ ಸಹಕಾರ ನೀಡಬೇಕು ಎಂದರು.

ಕಾಂಗ್ರೆಸ್ ಮುಖಂಡ ಅನುಪಮಾ ಮಹೇಶ್, ಜಾವಗಲ್ ಮಂಜುನಾಥ್, ಬಾಗೂರು ಮಂಜೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರ, ಎಂ.ಶಂಕರ್, ಎಂ.ಎ.ರಂಗಸ್ವಾಮಿ. ಗಿರೀಶ್, ಎನ್.ಡಿ.ಕಿಶೋರ್, ಎಚ್.ಜೆ.ಕಿರಣ್, ಎನ್.ಎಸ್.ಪ್ರಕಾಶ್, ಲಕ್ಷ್ಮಣ್, ಶಮ್ಮು, ಮೋಹನ್, ಮಿಲ್ಟ್ರಿ ಮಂಜುನಾಥ, ಜಗದೀಶ್ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net