ನಿನಗಿಂತ ಒರಟು ಭಾಷೆ ನನಗೂ ಬರುತ್ತೆ

I can use harsher language than you
ರಾಜುಗೌಡ ಪಾಟೀಲ್
Published on

ಇಳಕಲ್ಲ: ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ ಏಕವಚನದಲ್ಲೇ ಹರಿಹಾಯ್ದು ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಶಾಸಕ ವಿಜಯಾನಂದ ಕಾಶಪ್ಪನವರ ನಮ್ಮ ತಂದೆಗೆ ಏಕವಚನದಲ್ಲೇ ದಡ್ಡ, ಅವನಿಗೆ ಏನೂ ಕೆಲಸ ಇಲ್ಲ, ಗೋಣು ನಿಂತಿಲ್ಲ, ಊರು ಬಿಟ್ಟು ಬಂದವ, ಲೆಕ್ಕಾೃಳಿಗೆ ಗೌಡ ಅಷ್ಟೇ ನೀ ಎಂಬ ಮುಂತಾದ ಪದಗಳನ್ನು ಬಳಸುವ ಮೂಲಕ ನಿಂದಿಸಿದ್ದಾನೆ. ಹೀಗಾಗಿ ನಾನೂ ಕೂಡ ಆತನ ವಿರುದ್ಧ ಮಾತನಾಡುತ್ತೇನೆ ಎಂದರು.

ಇಳಕಲ್ಲ ಸಮೀಪದ ಆದಾಪುರ ಗ್ರಾಮದಲ್ಲಿ ಹಮ್ಮಿಕೊಂಡ ಸಾಮಾಜಿಕ ನಾಟಕ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಶಾಸಕರ ಪುತ್ರ ರಾಜುಗೌಡ, ನಿಮ್ಮ ಸರ್ಕಾರ ಬಂದ ಮೇಲೆ ತಾಲೂಕಿನಲ್ಲಿ ಒಂದಾದರೂ ಅಭಿವೃದ್ಧಿ ಕೆಲಸ ಮಾಡಿದ್ದೀಯಾ ಎಂದು ಹಾಲಿ ಶಾಸಕರನ್ನು ಪ್ರಶ್ನಿಸಿದರು.

ಕ್ಷೇತ್ರದಲ್ಲಿ ಒಂದು ಪುಟ್ಟಿ ಮಣ್ಣು ಕೂಡ ಹಾಕಿಲ್ಲ. ತಾಲೂಕಿನಲ್ಲಿ ಇಸ್ಪೀಟ್ ಅಡ್ಡೆ, ಅಕ್ರಮ ಉಸುಕು ದಂಧೆ ಮಾಡುತ್ತ ಕಾಲ ಕಳೆಯುತ್ತಿದ್ದೀಯ. ಸುಮ್ನೆ ಕ್ಷೇತ್ರದ ಅಭಿವೃದ್ಧಿ ಕಡೆ ಗಮನಹರಿಸುವುದು ಬಿಟ್ಟು ನಮ್ಮ ತಂದೆ ವಿರುದ್ಧ ಮಾತನಾಡುತ್ತಿರುವುದು ಸರಿಯಲ್ಲ. ನೀನು ಇದೇ ರೀತಿ ಮುಂದುವರಿದರೆ, ನಾನು ಕೂಡ ಮುಂದುವರಿಯುತ್ತೇನೆ ಎಂದು ಟಾಂಗ್ ಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net