ಮೀಸಲಾತಿಯಿಂದಲೇ ನಾನು ಶಾಸಕನಾದೆ..!

Untitled-2
ನೆಲಮಂಗಲದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾಮ್​ ಭಾವಚಿತ್ರ ಮೆರವಣಿಗೆಯಲ್ಲಿ ಶಾಸಕ ಎನ್​.ಶ್ರೀನಿವಾಸ್​, ತಹಸೀಲ್ದಾರ್​ ಅಮೃತ್​ಆತ್ರೇಶ್​, ತಾಪಂ ಇಒ ಲ್ಮನಾರಾಯಣ್​, ಬಿಇಒ ರಮೇಶ್​, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಎಂ.ವಾಣಿ, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ಎಂ.ನಾರಾಯಣ್​ಗೌಡ, ಸದಸ್ಯ ಪ್ರಕಾಶ್​ಬಾಬು, ನಗರಸಭೆ ಅಧ್ಯಕ್ಷ ಎನ್​.ಗಣೇಶ್​, ಉಪಾಧ್ಯಕ್ಷ ಆನಂದ್​ ಇದ್ದರು.
Published on

ನೆಲಮಂಗಲ: ದೇಶಕ್ಕೆ ಅಂಬೇಡ್ಕರ್​ ನೀಡಿದ್ದ ಸಂವಿಧಾನದಿಂದ ನಾನು ಮೀಸಲು ೇತ್ರದ ಶಾಸಕನಾಗಿದ್ದೇನೆ ಎಂದು ಶಾಸಕ ಎನ್​.ಶ್ರೀನಿವಾಸ್​ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ದಲಿತರ ಸಂಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾಮ್​ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಶತಮಾನದವರೆಗೂ ಸಂವಿಧಾನದ ಆಶಯ, ಮೌಲ್ಯಗಳು ಜೀವಂತವಾಗಿರುತ್ತವೆ. ವಿಶ್ವದಲ್ಲೇ ಅತಿಹೆಚ್ಚು ಜ್ಞಾನ ಸಂಪಾದಿಸಿದ ಮಹಾನ್​ ಚೇತನ. ಸಮಾಜದಲ್ಲಿ ಶೋಷಿತರ ಧ್ವನಿಯಾಗಿದ್ದು, ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸಂವಿಧಾನ ನೀಡಿದ್ದು, ಅದರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಹಸಿರು ಕಾಂತ್ರಿ ಹರಿಕಾರ ಬಾಬು ಜಗಜೀವನರಾಮ್​ ಅವರು ಆಹಾರ ಸಮಸ್ಯೆ ನೀಗಿಸಿ ಕೃಷಿ ೇತ್ರದಲ್ಲಿ ಬದಲಾವಣೆ ತಂದಿದ್ದಾರೆ ಎಂದರು.

ಸಾಧಕರಿಗೆ ಸನ್ಮಾನ: ವಕೀಲರಾದ ಶಿವಯ್ಯ, ಶಿವಣ್ಣ, ಸಿದ್ದಗಂಗಮ್ಮ, ವಸಂತ್​ಕುಮಾರ್​, ರಾಮಯ್ಯ, ಜಯಣ್ಣ, ಪ್ರಗತಿಪರ ರೈತ ಲ್ಮನಾರಾಯಣ್​, ನರಸಿಂಹಮೂರ್ತಿ, ಲ್ಮನರಸಮ್ಮ, ಗಂಗಹನುಮಯ್ಯ, ನಳಿನಾಬಾಯಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಅದ್ದೂರಿ ಮೆರವಣಿಗೆ: ಅಂಬೇಡ್ಕರ್​ ಹಾಗೂ ಬಾಬು ಜಗಜೀವನ್​ ರಾಮ್​ ಜನ್ಮದಿನದ ಪ್ರಯುಕ್ತ ನಗರದ ಪ್ರವಾಸಿ ಮಂದಿರ ಬಳಿ ಸಮಾವೇಶಗೊಂಡು, ಬೆಳ್ಳಿರಥದಲ್ಲಿ ಅಂಬೇಡ್ಕರ್​ ಹಾಗೂ ಬಾಬು ಜಗಜೀವನರಾಮ್​ ಅವರ ಭಾವಚಿತ್ರವಿಟ್ಟು, ಮುಖ್ಯರಸ್ತೆ ಮೂಲಕ ಜಾನಪದ ಕಲಾತಂಡದೊಂದಿಗೆ ಅದ್ದೂರಿ ಮೆರವಣಿಗೆ ನಡೆಸಿದರು. ಮೆರವಣಿಗೆ ವೇಳೆ ನಗರದ ಬಸ್​ ನಿಲ್ದಾಣ ಬಳಿ ಶಾಸಕ ಎನ್​.ಶ್ರೀನಿವಾಸ್​ ತಮಟೆ ಬಾರಿಸಿದರೆ ಮುಖಂಡರು ಕುಣಿದು ಕುಪ್ಪಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮನಾಭ್​, ಸದಸ್ಯರಾದ ನರಸಿಂಹಮೂರ್ತಿ, ಪುರುಷೋತ್ತಮ್​, ಸುಜಾತಾ ಮುನಿಯಪ್ಪ, ಲೋಲಾ ಗಂಗಾಧರ್​, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಸಿ.ಆರ್​.ಗೌಡ, ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಟಿ.ನಾಗರಾಜು, ಉಪಾಧ್ಯಕ್ಷ ಸಿ.ಎಂ.ಗೌಡ, ವಕೀಲ ಗಂಗರಾಜು, ವಿಜಯ್​ಕುಮಾರ್​, ಕನಕರಾಜು ಇದ್ದರು.

ಮೀಸಲು ಕ್ಷೇತ್ರದ ಅಭಿವೃದ್ಧಿ :ನೆಲಮಂಗಲ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಎಸ್ಸಿ&ಎಸ್ಟಿ ಸಮುದಾಯದವರು ಹೆಚ್ಚಿದ್ದಾರೆ. ನಾನು ಕ್ಷೇತ್ರದ ಶಾಸಕನಾಗಿದ್ದು, ಸಮುದಾಯದವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ಷೇತ್ರದಾದ್ಯಂತ 30 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕ್ಷೇತ್ರದ 4 ಹೋಬಳಿಗೆ ತಲಾ 75 ಲಕ್ಷದಂತೆ ಅಂಬೇಡ್ಕರ್​ ಭವನ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಅಂಬೇಡ್ಕರ್​, ಬಾಬು ಜಗಜೀವನ ರಾಮ್​ ಭವನ ನಿರ್ಮಿಸಲಾಗಿದೆ. ತಾಲೂಕುಮಟ್ಟದಲ್ಲಿ ಜಾಗ ಗುರುತಿಸಿ ಬೃಹತ್​ ಭವನ ನಿರ್ಮಾಣಕ್ಕೆ 25 ಕೋಟಿ ರೂ. ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ ಎಂದು ಎನ್​.ಶ್ರೀನಿವಾಸ್​ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net