

ಚಿತ್ರದುರ್ಗ: ಈ ನೆಲದ ಕಾನೂನಿಗಿಂತ ನಾನು ಸೇರಿ ಯಾರೂ ದೊಡ್ಡವರಲ್ಲ. ನಮ್ಮ ಪ್ರಜಾಪ್ರಭುತ್ವ ಅಂತ್ಯಂತ ಪ್ರಬಲವಾಗಿದೆ. ನಾನು ತಪ್ಪು ಮಾಡಿದ್ದರೆ ಒಂದು ಕ್ಷಣವೂ ಅಧಿಕಾರಲ್ಲಿ ಮುಂದುವರಿಯಲು ಸಾಧ್ಯ ವಾಗುತ್ತಿರಲಿಲ್ಲ ಎಂದು ಸಚಿವ ಡಿ.ಸುಧಾಕರ್ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ವಿರುದ್ಧ ದಾಖಲಾಗಿರುವು ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆ ನೀಡಿದೆ ಎಂದ ಅವರು, ಪೊಲೀಸ್ ಇಲಾಖೆ ನೋಟಿಸ್ ತಲುಪಿಲ್ಲ. ಭೂ ವ್ಯವಹಾರ ಪಾರದರ್ಶಕ, ಕಾನೂನು ಸಮ್ಮತವಾಗಿದ್ದು, ದಾಖಲೆಗಳಿವೆ. ತಪ್ಪು ಮಾಡಿಲ್ಲದ ನಾನು ಯಾಕೆ ಭಯ ಪಡಬೇಕು. ಸತ್ಯ ಒಂದು ದಿನ ಗೆಲ್ಲಲೇ ಬೇಕು ಎಂದರು.
2008ರಲ್ಲಿ ಸಚಿವನಾಗಿ ಅಧಿಕಾರ ಸ್ವೀಕರಿಸಿ ಒಂದು ತಿಂಗಳಲ್ಲಿಯೇ ನನ್ನ ವಿರುದ್ಧ ಬಹುದೊಡ್ಡ ಷಡ್ಯಂತರ ನಡೆಯಿತು. ಸಿಬಿಐ ತನಿಖೆಗೆ ಆದೇಶವಾಯಿತು. ಅಂದು ಎದೆಗುಂದಲಿಲ್ಲ. ಈಗಲೂ ಅಷ್ಟೇ ಎಂದರು.