ನಾನು ಮೋದಿ ಪರಿವಾರ… ಮೋದಿಗಾಗಿ ಈ ಭಾನುವಾರ

12-klg 2- IRANNA KADADI
Published on

ಕಲಘಟಗಿ: ‘ನಾನು ಮೋದಿ ಪರಿವಾರ... ‘ಮೋದಿಗಾಗಿ ಈ ಭಾನುವಾರ’ ಎಂಬ ಹೊಸ ಘೊಷವಾಕ್ಯದ ಮೂಲಕ ದೇಶದಲ್ಲಿ ಮತ್ತೆ ಮೋದಿ ಆಡಳಿತದ ರಣಕಹಳೆ ಮೊಳಗಲಿದೆ. ದೇಶ ಅಂಥ ಬಂದಾಗ ಮತದಾನ ಫ್ರಭುಗಳು ಅಭಿವೃದ್ದಿಯನ್ನೇ ಬಯಸುತ್ತಾರೆ ವಿನಃ ಜಾತಿ, ಬಿಟ್ಟಿ ಭಾಗ್ಯಗಳನ್ನಲ್ಲ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಕಳೆದ ಹತ್ತು ವರ್ಷದ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಅಭಿವೃದ್ಧಿ ಪರ್ವ ಉಗಮವಾಗಿದೆ. ಅಭಿವೃದ್ಧಿಯನ್ನೇ ಇಟ್ಟುಕೊಂಡು ಜನಾಶೀರ್ವಾದ ಕೇಳುತ್ತಿದ್ದೇವೆಯೇ ಹೊರತು ಬಿಟ್ಟಿ ಭಾಗ್ಯಗಳ ಆಶ್ವಾಸನೆ ನೀಡುವ ಮೂಲಕ ಅಲ್ಲ ಎಂದರು.

2000 ಮತಗಟ್ಟೆಗಳಿರುವ ಪ್ರತಿ ಬೂತ್ ಮಟ್ಟದಲ್ಲಿ ಮನೆಯಂಗಳದಲ್ಲಿ ಸಂವಾದ ಎಂಬ ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಜನರಿಗೆ ಕೇಂದ್ರ ಸರ್ಕಾದ ಅಭಿವೃದ್ಧಿಯ ಸಾಧನೆ ತಿಳಿಸುವ ಕಾರ್ಯಕ್ಕೆ ನಾವು ಮುಂದಾಗಲಿದ್ದೇವೆ ಎಂದರು.

ಅಭಿವೃದ್ಧಿ ಪರ್ವದ ಸಾಧನೆಯಲ್ಲಿ ದೇಶಕ್ಕೆ ಮೋದಿ ಎಷ್ಟು ಮುಖ್ಯವೋ ಧಾರವಾಡ ಕ್ಷೇತ್ರದ ಆಭಿವೃದ್ಧಿಗೆ ಪ್ರಲ್ಹಾದ ಜೋಶಿ ಅವರೂ ಅಷ್ಟೇ ಮುಖ್ಯವಾಗಿದೆ ಎಂದರು.

ಲೋಕಸಭಾ ಸಂಚಾಲಕ ಮಾ. ನಾಗರಾಜ, ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ, ಈರಣ್ಣ ಜಡಿ, ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ, ಐ.ಸಿ. ಗೋಕುಲ, ಬಿಜೆಪಿ ತಾಲೂಕು ಅಧ್ಯಕ್ಷ ಬಸವರಾಜ ಶರೇವಾಡ್, ಸಿ.ಎಫ್. ಪಾಟೀಲ, ಸದಾನಂದ ಚಿಂತಾಮಣಿ, ಫಕೀರೇಶ ನೇಸರೇಕರ್, ಕಿರಣಪಾಟೀಲ ಕುಲಕರ್ಣಿ, ಅಣ್ಣಪ್ಪ ಓಲೇಕಾರ, ಮದನ್ ಪಾಟೀಲ್​ಕುಲಕರ್ಣಿ, ರಾಜು ಆರ್. ಕಲಘಟಗಿ, ಚಂದ್ರಗೌಡ ಪಾಟೀಲ್, ಬಸವರಾಜ ಹೊನ್ನಿಹಳ್ಳಿ, ಪರಶುರಾಮ ಹುಲಿಹೊಂಡ, ವಿಜಯಲಕ್ಷ್ಮೀ ಆಡಿನವರ, ಮಂಜುಳಾ ನಾಯಕ್, ಬೀರಪ್ಪ ಡೊಳ್ಳಿನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net