

ಬೆಂಗಳೂರು: ‘ನಾನು ಸಿಎಂ,ಡಿಸಿಎಂಗೆ ದತ್ತು ಪುತ್ರ ಇದ್ದಂತೆ('I am like an adopted son of CM, DCM'). ಅವರು ನನ್ನನ್ನ ಕೈ ಬಿಡುತ್ತಾರಾ? ಅವರು ನನಗೆ ಅನ್ಯಾಯ ಆಗಲು ಬಿಡುವುದಿಲ್ಲ’ ಎಂದು ಶಾಸಕ ಪ್ರದೀಪ್ ಈಶ್ವರ್(Pradeep Eshwar)ಹೇಳಿದರು.
ಲೋಕಸಭಾ ಸದಸ್ಯ ಡಾ.ಕೆ.ಸುಧಾಕರ್ ಕಾಂಗ್ರೆಸ್‌ಗೆ ಬರುವ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ನನ್ನನ್ನು ಟಚ್ ಮಾಡಲೂ ಸಿಎಂ, ಡಿಸಿಎಂ ಬಿಡುವುದಿಲ್ಲ. ದತ್ತು ಪುತ್ರ ಮತ್ತು ಪಕ್ಕದ ಮನೆ ಪುತ್ರನಿಗೆ ಡಿಫರೆನ್ಸ್ ಇಲ್ಲವೆ ಎಂದು ಲೇವಡಿ ಮಾಡಿದರು.
ಸುಧಾಕರ್ ಕಾಂಗ್ರೆಸ್ ಬರುವ ವಿಚಾರ ಪಕ್ಷದ ಹಿರಿಯರಿಗೆ ಬಿಟ್ಟಿದ್ದು. ಸ್ವಾಗತ ಮಾಡಲು ನಾನ್ಯಾರು? ನಾನೊಬ್ಬ ಸಾಮಾನ್ಯ ಮನುಷ್ಯ. ಅವರಿಗೆ ರೆಡ್ ಕಾರ್ಪೆಟ್ ಹಾಕಲು ನಾನಾರು? ಅದನ್ನು ನಮ್ಮ ನಾಯಕರು ತೀರ್ಮಾನಿಸುತ್ತಾರೆ ಎಂದರು.
ಪ್ರತಿಪಕ್ಷ ನಾಯಕ ಅಶೋಕ್, ಎಂಎಲ್‌ಸಿ ರವಿಕುಮಾರ್ ದೊಡ್ಡ ಹಿಂದೂ ಎನ್ನುತ್ತಾರೆ. ಅವರೆಲ್ಲ ದೊಡ್ಡ ಡೋಂಘಿ ಹಿಂದೂಗಳು. ನೀವು ಧರ್ಮ ಏನಾದರೂ ಓದಿಕೊಂಡಿದ್ದೀರಾ? ಭಗವದ್ಗೀತೆ ಮೇಲೆ ಡಿಬೇಟ್ ಮಾಡೋಣ ಬನ್ನಿ ಎಂದು ಸವಾಲು ಹಾಕಿದರು.
ಸಿಎಂ, ಪರಮೇಶ್ವರ್ ಬಗ್ಗೆ ಪ್ರತಾಪ್ ಸಿಂಹ ಲೇವಡಿ ಮಾಡಿದ್ದಕ್ಕೆ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರತಾಪ್ ಸಿಂಹ ಲಜ್ಜೆಗೆಟ್ಟ ವ್ಯಕ್ತಿ. ಪರಮೇಶ್ವರ್ ಬಗ್ಗೆ ಮಾತನಾಡುವಾಗ ಮಿತಿ ಇರಲಿ ಎಂದು ಎಚ್ಚರಿಕೆ ನೀಡಿದರು.
ಪಾರ್ಲಿಮೆಂಟ್ ಅಟ್ಯಾಕ್‌ಗೆ ಪಾಸ್ ಕೊಟ್ಟವನು ಪರಮೇಶ್ವರ್ ಬಗ್ಗೆ ಮಾತನಾಡುತ್ತಾನೆ. ಪ್ರತಾಪ್ ಸಿಂಹ ಸೋತು ಹೋಗಿದ್ದಾನೆ. ಮತ್ತೆ ಶಾಸಕನಾಗಲೂ ಆಗುವುದಿಲ್ಲ. ಅದಕ್ಕೇ ನಮ್ಮ ಸಿಎಂ ಬಗ್ಗೆ ಮಾತನಾಡುತ್ತಾನೆ ಎಂದು ವ್ಯಂಗ್ಯವಾಡಿದರು.
9 ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಲ್ಲ. ಪ್ರಾಧ್ಯಾಪಕರಿಗೆ ಒಂದು, ಒಂದೂವರೆ ಲಕ್ಷ ಸಂಬಳ ಕೊಡಬೇಕು. ಅಶೋಕ್ ಮನೆಯಿಂದ ಏನು ತಂದು ಕೊಡಲ್ಲ ಎಂದು ತಿರುಗೇಟು ನೀಡಿದರು.
ನಾನು ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತನಾಡುವಷ್ಡು ದೊಡ್ಡವನಲ್ಲ. ಕೆಪಿಸಿಸಿ ಕಚೇರಿ ದೇವಸ್ಥಾನ ಇದ್ದಂತೆ. ನಾನೊಬ್ಬ ದೇವಸ್ಥಾನದ ಕಸಗುಡಿಸುವವನು ಇದ್ದಂತೆ. ಹೈಕಮಾಂಡ್ ಯಾರನ್ನಾದರೂ ಮಾಡಲಿ ಎಂದು ಪ್ರಶ್ನೆಯೊಂದಕ್ಕೆ ಪ್ರದೀಪ್ ಈಶ್ವರ್ ಪ್ರತಿಕ್ರಿಯಿಸಿದರು.