6ನೇ ರ‌್ಯಾಂಕ್ ಪಡೆದಿರುವುದು ಖುಷಿ ನೀಡಿದೆ

sahana
Published on

ಕಾರ್ಕಳ: ಪಿಯುಸಿ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗ ವಿದ್ಯಾರ್ಥಿ ಸಹನಾ ನಾಯಕ್ 594 ಅಂಕ ಪಡೆದು ರಾಜ್ಯಕ್ಕೆ 6ನೇ ರ‌್ಯಾಂಕ್ ಹಾಗೂ ಜಿಲ್ಲೆಗೆ 2ನೇ ರ‌್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ. ಕಾರ್ಕಳ ಜವಳಿ ಉದ್ಯಮಿ ಸುನೀಲ್ ನಾಯಕ್ ಹಾಗೂ ಧನಲಕ್ಷ್ಮೀ ಪೈ ದಂಪತಿ ಪುತ್ರಿ.

ವಿದ್ಯಾರ್ಥಿ ಸಾಧನೆಯನ್ನು ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿ ಹಾಗೂ ಉಪನ್ಯಾಸ ವರ್ಗ ಅಭಿನಂದಿಸಿದ್ದಾರೆ ಕಾಲೇಜಿನ ಉಪನ್ಯಾಸಕರು ಹಾಗೂ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಮನೆಯಲ್ಲಿ ಪೋಷಕರ ಪ್ರೋತ್ಸಹವೂ ಬಹಳಷ್ಟಿತ್ತು. ಅಂಕದ ನಿರೀಕ್ಷೆ ಇತ್ತು. ಆದರೆ ರಾಜ್ಯಕ್ಕೆ 6ನೇ ಸ್ಥಾನ ಪಡೆದಿರುವುದು ತುಂಬಾ ಖುಷಿ ನೀಡಿದೆ. ಮುಂದೆ ಸಿ.ಎ ಆಗಬೇಕೆಂಬ ಕನಸು ಕಂಡಿದ್ದೇನೆ. -ಸಹನಾ ನಾಯಕ್, 6ನೇ ರ‌್ಯಾಂಕ್ ವಿದ್ಯಾರ್ಥಿನಿ https://www.vijayavani.net/manur-temple-jatre-muhurta-bali-cultural-program https://www.vijayavani.net/kundapur-excellent-college-achievement

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net