ಮಗ ಕೆತ್ತಿರುವ ಮೂರ್ತಿ ಅಂತಿಮಗೊಂಡಿರುವದು ಖುಷಿಯಾಗಿದೆ

Yogiraj
Published on

ಮೈಸೂರು: ರಾಮಜನ್ಮ ಭೂಮಿ ಟ್ರಸ್ಟ್ ನನ್ನ ಮಗ ಕೆತ್ತಿರುವ ವಿಗ್ರವನ್ನು ಅಂತಿಮಗೊಳಿಸಿರುವ ವಿಚಾರ ಕೇಳಿ ಖುಷಿ ಆಯಿತು ಎಂದು ಶಿಲ್ಪಿ ಅರುಣ್ ಯೋಗಿರಾಜ್ ತಾಯಿ ಸರಸ್ವತಿ ಸಂತೋಷ ವ್ಯಕ್ತ ಪಡಿಸಿದ್ದಾರೆ.

ಇದೊಂದು ಹೆಮ್ಮೆಯ ವಿಚಾರ. ನನ್ನ ಮಗ ತನ್ನ ಕೆಲಸಕ್ಕೆ ಜೀವ ತುಂಬಿದ್ದಾನೆ. ನಮ್ಮನ್ನು ಸಮಾಜದಲ್ಲಿ ತಲೆ ಎತ್ತುವಂತೆ ಮಾಡಿದ್ದಾನೆ. ಅವನು ಮಾಡಿರುವ ವಿಗ್ರವನ್ನು ಇಂದು ಇಡೀ ಪ್ರಪಂಚ ನೋಡುತ್ತದೆ. ಅವನ ತಾತ ಮತ್ತು ಅಪ್ಪನ ಆಶೀರ್ವಾದದಿಂದ ಇದೆಲ್ಲಾ ಸಾಧ್ಯ ಆಗಿದೆ. ನಾವು ಕೂಡ ರಾಮನನ್ನು ನೋಡಲು ಅಯೋಧ್ಯೆಗೆ ಹೋಗುತ್ತೇವೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net