ಚುನಾವಣೆಯಲ್ಲಿ ೧೦೦ಕ್ಕೆ ೧೦೦ ಗೆಲುವು ಸಾಧಿಸುವ ವಿಶ್ವಾಸವಿದೆ: ಡಾ.ಮಂಥರ್‌ಗೌಡ

17Adarshkdga1
Published on

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಡಾ.ಮಂಥರ್‌ಗೌಡರವರು ಚುನಾವಣಾ ಅಧಿಕಾರಿ ಯತೀಶ್ ಉಳ್ಳಾಲ್ ರವರಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.


ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕರ್ತರು, ಹಿರಿಯ ನಾಯಕರು, ಮೇಲ್ಮಟ್ಟದ ವರಿಷ್ಠರು ಎಲ್ಲರೂ ಒಗ್ಗಟ್ಟಾಗಿ ಸೇರಿ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ೧೦೦ಕ್ಕೆ ೧೦೦ ಗೆಲುವು ಸಾಧಿಸುವ ವಿಶ್ವಾಸವಿದೆ. ಮತದಾರರು ಬದಾವಣೆ ಬಯಸುತ್ತಿದ್ದಾರೆ. ಭ್ರಷ್ಟಚಾರ ವಿರುದ್ಧ ಹೋರಾಟ ಮಾಡುತ್ತಿದ್ದಾರೆ. ೨೫ ವರ್ಷ ಅಧಿಕಾರ ನೀಡಿಯೂ ಜನಮೆಚ್ಚಿದ ಕೆಲಸ ಮಾಡದ ಪರಿಣಾಮ ನನಗೆ ಅವಕಾಶ ನೀಡುತ್ತಾರೆ ಎಂಬ ವಿಶ್ವಾವಿದೆ ಎಂದರು.


ಪ್ರತಿ ಕಾರ್ಯಕರ್ತರು ತಮ್ಮ ಗ್ರಾಮಗಳಲ್ಲಿ ಕೆಲಸ ಮಾಡಿ ಜನಾಭಿಪ್ರಾಯ ಸಂಗ್ರಹಿಸಲಿದ್ದಾರೆ. ಜತೆಗೆ ಅವರ ಪ್ರೀತಿ ವಿಶ್ವಾಸವನ್ನು ಗಳಿಸುವ ಕೆಲಸ ಮಾಡಲಿದ್ದಾರೆ ಎಂದರು.


೩೨,೦೦೦ ಮತಪಡೆದು ತೋರಿಸಿ: ಮಡಿಕೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಪಿ.ಅಪ್ಪಚ್ಚು ರಂಜನ್‌ರವರು ಕಾಂಗ್ರೆಸ್ ಅಭ್ಯರ್ಥಿಯನ್ನು ೩೨,೦೦೦ ಅಂತರದಿಂದ ಸೋಲಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆದರೆ, ಎಂ.ಪಿ.ಅಪ್ಪಚ್ಚು ರಂಜನ್‌ರವರು ಮೊದಲು ೩೨,೦೦೦ ಮತ ಪಡೆದು ತೋರಿಸಲಿ ಎಂದು ಸವಾಲೆಸೆದ ಅವರು, ಜನರ ಬಳಿ ತೆರಳಿದ್ದರೆ ತಿಳಿಯುತ್ತಿತ್ತು ಅವರನ್ನು ಯಾವ ರೀತಿ ತಿರಸ್ಕಾರ ಮಾಡುತ್ತಾರೆ ಎಂಬುದು ತಿಳಿಯುತ್ತದೆ ಎಂದರು.


ಬಿಜೆಪಿ ಶಾಸಕರ ದುರಾದೃಷ್ಠಕ್ಕೆ ನಾವು ೫ ಶತಮಾನದಿಂದ ಇಲ್ಲೆ ನೆಲೆಸಿದ್ದೇವೆ. ೯೦ ವರ್ಷದ ಮನೆಯಲ್ಲಿ ನಾವು ಇದ್ದೇವೆ. ಜತೆಗೆ ಈ ಕ್ಷೇತ್ರದ ಅಳಿಯಕೂಡ ಆಗಿದ್ದೇನೆ. ಇದನ್ನು ಸಹಿಸಿಕೊಳ್ಳದ ಅವರು ಹೊರಗಡೆಯವನು ಎಂದು ಹೇಳುತ್ತಿದ್ದಾರೆ ಎಂದರು.


ವಯುಕ್ತಿಕ ದ್ವೇಷ ಸಾಧಿಸುವುದನ್ನು ಬಿಟ್ಟು ಜನಪರ ಕೆಲಸ ಮಾಡಿದ ಅವರು, ಮತದಾರರು ಬದಲಾವಣೆಗಾಗಿ ಮತ್ತು ಅಭಿವೃದ್ಧಿಗಾಗಿ, ಭ್ರಷ್ಟಚಾರದ ವಿರುದ್ಧವಾಗಿ ಹೋರಾಟ ಮಾಡುವಂತಾಗಬೇಕು ಎಂದರು.


ಕ್ಷಮೆ ಯಾಚಿಸಿದ ಮಂಥರ್: ಮರವಣಿಗೆ ಸಂದರ್ಭ ನಗರದ ನಿವಾಸಿಗಳಿಗೆ ತೊಂದರೆಯಾಗಿದೆ. ವಾಹನ ಸಂಚಾರಕ್ಕೆ ಅಡೆತಡೆಯಾಗಿದೆ. ದಿನನಿತ್ಯದ ಕೆಲಸಗಳಿಗೆ ತೊಂದರೆಯಾಗಿದೆ. ಈ ಹಿನ್ನೆಲೆ ಮಡಿಕೇರಿ ಜನತೆ ಬಳಿ ಕ್ಷಮೆಯಾಚಿಸುತ್ತೇನೆ ಎಂದರು.


ಚುನಾವಣೆಯಲ್ಲಿ ಈ ಬಾರಿ ಗೆದ್ದೆಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ನಾವು ಇನ್ನೊಬ್ಬರನ್ನು ಸೋಲಿಸಬೇಕು ಎಂಬ ಆಸೆಯಿಲ್ಲ. ಗೆದ್ದು ಜನಮೆಚ್ಚಿದ ಕೆಲಸ ಮಾಡುತ್ತೇವೆ ಎಂದ ಅವರು, ಭವಿಷ್ಯದ ಚಿಂತನೆಯಿಂದ ವಿದ್ಯಾವಂತರನ್ನು ಆಯ್ಕೆ ಮಾಡುವ ಯೋಚನೆಯನ್ನು ಮತದಾರರು ಮಾಡಿದ್ದಾರೆ ಎಂದರು.


ಜೀವಿಜಯ ನಮ್ಮ ಪಕ್ಷದಲ್ಲಿದ್ದಾರೆ. ೨-೩ ದಿನ ಟೈಂ ತೆಗೆದುಕೊಂಡಿದ್ದಾರೆ. ಇನ್ನೆರೆಡು ದಿನಗಳಲ್ಲಿ ಅವರನ್ನು ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು. ನಮ್ಮ ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.


ಈ ಸಂದರ್ಭದಲ್ಲಿ ಮಂಥರ್‌ಗೌಡರವರ ಪತ್ನಿ ದಿವ್ಯ ಮಂಥರ್‌ಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕೆ.ಪಿ.ಸಿ.ಸಿ ಪ್ರಮುಖರಾದ ಎಚ್.ಎಸ್.ಚಂದ್ರಮೌಳಿ, ಕೆ.ಪಿ.ಚಂದ್ರಕಲಾ ಸಾವಿರಾರು ಕಾರ್ಯಕರ್ತರು, ಬೆಂಬಲಿಗರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net