ಸಿನಿಮಾದ ಕಥೆ ವಿಭಿನ್ನವಾಗಿರುವುದರಿಂದ ಒಪ್ಪಿಕೊಂಡಿದ್ದೇನೆ

Dhanveer
Published on

ಮೈಸೂರು: ಹಯಗ್ರೀವ ನನ್ನ 5ನೇ ಚಿತ್ರವಾಗಿದೆ. ಸಿನಿಮಾದ ಕಥೆ ವಿಭಿನ್ನವಾಗಿರುವುದರಿಂದ ಒಪ್ಪಿಕೊಂಡಿದ್ದೇನೆ ಎಂದು ನಟ ಧನ್ವೀರ್ ತಿಳಿಸಿದರು.

ಚಾಮುಂಡೇಶ್ವರಿ ನನ್ನ ಆರಾಧ್ಯ ದೈವವಾಗಿದೆ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮುಹೂರ್ತ ನಡೆದಿರುವುದು ಖುಷಿ ನೀಡಿದೆ ಎಂದು ತಿಳಿಸಿದರು.

ನಿರ್ದೇಶಕ ರಘುಕುಮಾರ್ ಮಾತನಾಡಿ, ಪುರಾಣದ ಪಾತ್ರ ಒಂದರ ವಸ್ತು ವಿಷಯದ ಮೂಲಕ ಮಾಸ್ ಕಥೆಯನ್ನು ಬರೆದಿದ್ದೇನೆ. ಈ ಕಥೆ ಧನ್ವೀರ್ ಅವರಿಗೆ ಸೂಕ್ತವಾಗಿದೆ. ಇದೊಂದು ನಮ್ಮ ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯತ್ನವಾಗಿದೆ. ಇದು ಪಕ್ಕಾ ಜನರನ್ನು ತಲುಪುತ್ತೇವೆ ಎಂದರು.

ನಾಯಕ ನಟಿ ಸಂಜನಾ, ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್, ಚಿತ್ರ ತಂಡದ ಯೋಗಾನಂದ, ಕಾರ್ತಿಕ್, ಚಂದನ್‌ಗೌಡ, ಶೈಲೇಶ್, ಮಹೇಶ್, ಉಮೇಶ್, ಅರ್ಜುನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net