ಕತ್ತೆಕಿರುಬ ಸೆರೆಗೆ ಕಾರ್ಯಾಚರಣೆ

ilk 9-2
ಇಳಕಲ್ಲದ ಆರ್.ವೀರಮಣಿ ಕ್ರೀಡಾಂಗಣದಲ್ಲಿ ಬುಧವಾರ ಕತ್ತೆಕಿರುಬ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ತಂಡ ಕಾರ್ಯಾಚರಣೆ ನೆಡೆಸಿತು. ಅರಣ್ಯಾಧಿಕಾರಿ ಪಿ.ಎಂ.ಪುರಾಣಿಕಮಠ, ನಾಗರತ್ನ ಕಬಾಡೆ ಮತ್ತಿತರರಿದ್ದಾರೆ.
Published on

ಇಳಕಲ್ಲ: ಪಟ್ಟಣದ ಆರ್.ವೀರಮಣಿ ಕ್ರೀಡಾಂಗಣದಲ್ಲಿ ಕತ್ತೆಕಿರುಬ ಕಾಣಿಸಿಕೊಂಡಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.

ಈ ಹಿನ್ನೆಲೆಯಲ್ಲಿ ಬುಧವಾರ ಅರಣ್ಯಾಧಿಕಾರಿ ತಂಡ ಕಾರ್ಯಾಚರಣೆ ನಡೆಸಿತು. ಆದರೆ ಕತ್ತೆಕಿರುಬ ತಪ್ಪಿಸಿಕೊಂಡು ಸ್ಮಶಾನದತ್ತ ಹೋಗಿದೆ.

ಸಾರ್ವಜನಿಕರು ಸ್ವಲ್ಪ ದಿನ ರಾತ್ರಿ ಸಮಯದಲ್ಲಿ ಓಡಾಡದಂತೆ ಹಾಗೂ ಕತ್ತೆಕಿರುಬ ಕಾಣಿಸಿಕೊಂಡರೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಎಂದು ಅರಣ್ಯಾಧಿಕಾರಿ ಪಿ.ಎಂ.ಪುರಾಣಿಕಮಠ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net