

ಶ್ರೀನಿವಾಸಪುರ: ಜಿಲ್ಲೆಯಲ್ಲಿ ಅರಣ್ಯ ಇಲಾಖೆ ಒತ್ತುವರಿ ತೆರವು ಕಾರ್ಯಾಚರಣೆ ಸಾಕಷ್ಟು ಸದ್ದು ಮಾಡಿದ್ದು, ಪರ&ವಿರೋಧ ಚರ್ಚೆಗಳ ನಡುವೆ ಈ ವಿಚಾರ ಕೇಂದ್ರ ಸರ್ಕಾರದ ಗಮನವನ್ನೂ ಸೆಳೆದಿದೆ. ಈಗ ತಾಲೂಕಿನಲ್ಲಿ ರೈತ ಸಂದ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ತಳ್ಳಾಟ, ಹಲ್ಲೆಗೂ ಕಾರಣವಾಗಿದೆ.
ಹೌದು. ಪಟ್ಟಣದ ತಹಸೀಲ್ದಾರ್ ಕಚೇರಿ ಮುಂಭಾಗ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತ ಸಂದ ಮುಖಂಡರ ನಡುವೆ ತಳ್ಳಾಟ, ನೂಕಾಟಕ್ಕೆ ಈ ವಿಚಾರವೇ ಕಾರಣವಾಗಿದ್ದು, ಒತ್ತುವರಿ ತೆರವು ವಿಚಾರ ರಾಜಕೀಯ ಬಣ್ಣ ಪಡೆಯತೊಡಗಿದೆ.
ಏನಿದು ಟನೆ?: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸೇರಿ ಬಲಾಢ್ಯರು ಅರಣ್ಯ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದು, ಅವರ ಜಮೀನುಗಳ ಜಂಟಿ ಸರ್ವೇ ನಡೆಸಬೇಕು ಎಂದು ಆಗ್ರಹಿಸಿ ರೈತ ಮುಖಂಡ ನಾರಾಯಣಗೌಡ ನೇತೃತ್ವದಲ್ಲಿ ತಹಸೀಲ್ದಾರ್ ಕಚೇರಿ ಮುಂಭಾಗ ಅರೆಬೆತ್ತಲೆ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಅಂಬೇಡ್ಕರ್, ಗಾಂಧಿ ಹಾಗೂ ಮಾಜಿ ಸ್ಪೀಕರ್ ರಮೇಶ್ಕುಮಾರ್ ಅವರ ಭಾವಚಿತ್ರ ಇಟ್ಟಿದ್ದರು. ಈ ವೇಳೆ ಗೌನಿಪಲ್ಲಿ ಗ್ರಾಪಂ ಮಾಜಿ ಸದಸ್ಯ ರಮೇಶ್ಬಾಬು, ರಮೇಶ್ಕುಮಾರ್ ೋಟೋ ಏಕೆ ಇಟ್ಟುಕೊಂಡು ತೇಜೋವಧೆ ಮಾಡುತ್ತೀರಿ ಎಂದು ಪ್ರಶ್ನಿದರು. ಇದು, ರೈತ ಮುಖಂಡರು ಹಾಗೂ ರಮೇಶ್ಬಾಬು ನಡುವೆ ಮಾತಿನ ಚಕಮಕಿಗೆ ಆಸ್ಪದ ಮಾಡಿತು.
ಇದರ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ತಹಸೀಲ್ದಾರ್ ಕಚೇರಿ ಆವರಣ ಸೇರಿಕೊಂಡು ಪ್ರತಿಭಟನಾನಿರತರ ಮೇಲೆ ಪ್ರತಿರೋಧ ವ್ಯಕ್ತಪಡಿಸಿದ ಸಂದರ್ಭದಲ್ಲಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮಧ್ಯಪ್ರವೇಶಿಸಿ ಕಾರ್ಯಕರ್ತರನ್ನು ಚದುರಿಸಿದರು.
ರಾಯಲ್ಪಾಡು ಹೋಬಳಿ ಜನಗಲಕುಂಟೆ ರಾಜ್ಯ ಅರಣ್ಯ ವ್ಯಾಪ್ತಿಯ ಹೊಸಹುಡ್ಯ ಗ್ರಾಮದ ಅರಣ್ಯಭೂಮಿಯ ಸರ್ವೇ ನಂ.1 ಮತ್ತು 2 ರಲ್ಲಿ 61 ಎಕರೆ ಅರಣ್ಯ ಒತ್ತುವರಿಯಾಗಿದೆ. ಈ ಕುರಿತಾಗಿ ನ.6 ರಂದು ಅರಣ್ಯ ಇಲಾಖೆ, ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಜಂಟಿ ಸರ್ವೇ ಮಾಡಲು ಸಬೂಬು ಹೇಳಿಕೊಂಡು ಮುಂದೂಡುತ್ತಿದ್ದವು. ಈ ಹಿನ್ನೆಲೆಯಲ್ಲಿ ತಹಸೀಲ್ದಾರ್ ತಕ್ಷಣ ಜಂಟಿ ಸರ್ವೇ ಮಾಡಿ ಬಲಾಢ್ಯರು ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ ಅರೆಬೆತ್ತಲೆ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ರೈತ ಸಂದ ಉಪಾಧ್ಯಕ್ಷ ನಾರಾಯಣಗೌಡ ತಿಳಿಸಿದರು.
ಪೇಮೆಂಟ್ ಗಿರಾಕಿಗಳು
ರೈತ ಸಂದ ಹೆಸರಿನಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತ ಮುಖಂಡ ನಾರಾಯಣಗೌಡ ಬಣದವರು ನಿಜವಾದ ರೈತರಲ್ಲ. ಪೇಮೆಂಟ್ ಗಿರಾಕಿಗಳು ಎಂದು ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿ, ರಮೇಶ್ಕುಮಾರ್ಗೆ ಜೈಕಾರ ಹಾಕಿದರು. ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ರೈತ ಮುಖಂಡರನ್ನು ತಹಸೀಲ್ದಾರ್ ಕಚೇರಿ ಆವರಣದ ಒಳಗೆ ಕರೆದೊಯ್ದು ರಸಿದರು. ಇದೇ ಸಮಯದಲ್ಲಿ ರೈತ ಮುಖಂಡರು ನ್ಯಾಯಕ್ಕಾಗಿ ೂಷಣೆ ಕೂಗಿದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರೈತ ಮುಖಂಡರನ್ನು ಸಮಾಧಾನ, ಸಂಧಾನ ಪ್ರಕಿಯೆಗಳು ನಡೆಸುವ ಪ್ರಸಂಗಗಳು ನಡೆದೇ ಇತ್ತು.
ಅನುಮತಿ ಪಡೆಯದೆ ಪ್ರತಿಭಟನೆ
ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲು ಅನುಮತಿ ಪಡೆದಿಲ್ಲ. ಇದು ಸಾರ್ವಜನಿಕ ಸ್ಥಳ, ನಿಮ್ಮ ಮನವಿ ಕೊಡಿ ತೆಗೆದುಕೊಳ್ಳುತ್ತೇವೆ. ಆದರೆ ಗಲಾಟೆ ಮಾಡುವ ಸ್ಥಳವಲ್ಲ. ಕಚೇರಿ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವ ಕೆಲಸ ಮಾಡಬೇಡಿ ಎಂದು ರೈತ ಮುಖಂಡರಿಗೆ ತಹಸೀಲ್ದಾರ್ ಜಿ.ಎನ್.ಸುಧೀಂದ್ರ ಸಲಹೆ ನೀಡಿದರು.
" ರಮೇಶ್ಕುಮಾರ್ ಅವರು ಜಮೀನನ್ನು ಹಣ ಕೊಟ್ಟು ರಿಜಿಸ್ಟರ್ ಮಾಡಿಕೊಂಡಿರುವುದು ಅಷ್ಟೆ, ಈ ಪ್ರತಿಭಟನಾಕಾರರ ಹಿಂದೆ ಯಾರೋ ಇರಬಹುದು. ಇದಕ್ಕೆ ಯಾರದೋ ಕುಮ್ಮುಕ್ಕು ಇದೆ."
- ದಿಂಬಾಲ್ ಅಶೋಕ್
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ
" ನಾವು ರಮೇಶ್ಕುಮಾರ್ ಅವರ ಭಾವಚಿತ್ರ ತೆಗೆಯುವಂತೆ ಒತ್ತಡ ಹೇರಿದಾಗ ಅವರ ೋಟೊ ತೆಗೆದ ಪ್ರತಿಭಟನಾ ನಿರತರು ಅಂಬೇಡ್ಕರ್ ಭಾವಚಿತ್ರವನ್ನು ಅಸಡ್ಡೆಯಾಗಿ ಎಲ್ಲಿ ಹಾಕಿದರೋ ಗೊತ್ತಿಲ್ಲ. ಅಂಬೇಡ್ಕರ್ಗೆ ಅಪಮಾನ ಎಸಗಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ."
- ರಾಮಾಂಜಮ್ಮ
ತಾಲೂಕು ದಲಿತ ನಾಯಕಿ