ಸಂಸದರ ಕಚೇರಿ ಮುಂದೆ ಹೈಡ್ರಾಮಾ !

14
Published on

‘ಮೈಸೂರು ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೊಡುಗೆ ಏನು’ ಎಂಬ ಸಂಸದ ಪ್ರತಾಪ್ ಸಿಂಹ ಅವರ ಪ್ರಶ್ನೆಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಸವಾಲು ಹಾಕಿ, ಬುಧವಾರ ದಾಖಲೆ ಸಮೇತ ಚರ್ಚೆಗೆ ಸಂಸದರ ಕಚೇರಿಗೆ ಆಗಮಿಸಿದ್ದ ವೇಳೆ ಹೈಡ್ರಾಮಾ ನಡೆಯಿತು.

ಮೈಸೂರಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ದಾಖಲೆಗಳ ಬಿಡುಗಡೆ ಮತ್ತು ಮುಖಾಮುಖಿ ಚರ್ಚೆಗಾಗಿ ಸಂಸದರ ಕಚೇರಿ ಇರುವ ಜಲದರ್ಶಿನಿ ಅತಿಥಿಗೃಹಕ್ಕೆ ಆಗಮಿಸಿದ ಎಂ.ಲಕ್ಷ್ಮಣ್ ನೇತೃತ್ವದ ಕಾಂಗ್ರೆಸ್ ನಿಯೋಗವನ್ನು ಪೊಲೀಸರು ತಡೆದರು.

ಅಗತ್ಯ ದಾಖಲೆ ಸಮೇತ ಆಗಮಿಸಿದ ಎಂ.ಲಕ್ಷ್ಮಣ್ ಚರ್ಚೆಗೆ ಸಂಸದರನ್ನು ಆಹ್ವಾನಿಸಿದರು. ಆದರೆ, ಪ್ರತಾಪ್ ಸಿಂಹ ಅವರು ಕಚೇರಿಯಲ್ಲಿ ಇರಲಿಲ್ಲ. ಇತ್ತ ಪೊಲೀಸರು ಎಂ.ಲಕ್ಷ್ಮಣ್ ಮತ್ತು ಕಾಂಗ್ರೆಸ್ ನಾಯಕರನ್ನು ಜಲದರ್ಶಿನಿ ಆವರಣಕ್ಕೂ ಬಿಡದೆ ತಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net