

ರಾಯಚೂರು: ಕೆಕೆಆರ್ ಡಿಬಿ ಮಂಡಳಿಗೆ ಶಾಸಕರನ್ನು ಅಧ್ಯಕ್ಷರಾಗಿಸುವ ರಾಜ್ಯ ಸರ್ಕಾರದ ನಿರ್ಣಯ ಖಂಡಿಸಿ ಜ.೨ ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೈಕ ಹೋರಾಟ ಸಮಿತಿ ಉಪಾಧ್ಯಕ್ಷ ಡಾ.ರಜಾಕ್ ಉಸ್ತಾದ್ ತಿಳಿಸಿದ್ದಾರೆ.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜನರ ಅಭಿಪ್ರಾಯ, ಹೋರಾಟದಿಂದ ಅಸ್ತಿತ್ವಕ್ಕೆ ಬಂದ ಮಂಡಳಿ ಕಾಯ್ದೆಗೆ ತಿದ್ದುಪಡಿಯನ್ನು ಸರ್ಕಾರವೇ ಏಕಪಕ್ಷೀಯ ವಾಗಿ ತೀರ್ಮಾನಿಸಿರುವುದು ಖಂಡನಿಯ. ಅಭಿವೃದ್ಧಿಗಾಗಿನ ಮಂಡಳಿಯನ್ನು ಪಕ್ಷದ ಸರ್ಕಾರ ರಾಜಕೀಯ ನಿರಾಶ್ರಿತರ ಕೇಂದ್ರ ಮಾಡುವ ನಿರ್ಣಯವನ್ನು ಅಧಿವೇಶನ ದೊಳಗೆ ವಾಪಸ್ ಪಡೆಯಬೇಕು.
ಈ ನಿರ್ಣಯದಿಂದ ಆಗುವ ಸಮಸ್ಯೆ ಬಗ್ಗೆ ಈ ಭಾಗದ ಶಾಸಕರಿಗೆ, ಸಚಿವರಿಗೆ ಮನವರಿಕೆ ಮಾಡಿಕೊಡಲಾಗುವುದು. ಈ ಭಾಗದ ಎಲ್ಲ ಶಾಸಕರಿಗೆ ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಪತ್ರ ಬರೆದು ಶಾಸಕರಿಗೆ ಅಧ್ಯಕ್ಷ ಸ್ಥಾನ ಕೊಡುವುದರಿಂದ ಆಗುವ ತೊಂದರೆ ಬಗ್ಗೆ ಪತ್ರ ಬರೆದಿದ್ದಾರೆ. ಉಳಿದವರ ನಿರಾಸಕ್ತಿಗೆ ಬೇಸರ ಇದೆ.
ಸಚಿವರ ಅಧಿಕಾರ, ಐಎಎಸ್ ಅಧಿಕಾರಿಗಳ, ಸರ್ಕಾರದ ಜತೆ ಸಂವಹನ ಸಾಧಿಸಲು ಅಧ್ಯಕ್ಷ ರಾಗುವ ಶಾಸಕರಿಗೆ ಅಗದು. ಯಾವುದೇ ಆರ್ಥಿಕ, ಕಾಯ್ದೆ, ಯೋಜನೆಗೆ ಅನುಮೋದನೆ ಪಡೆಯಲು ಸಂಪುಟದಲ್ಲಿ ಇರದವರಿಗೆ ಅಧಿಕಾರ ಇದ್ದರೂ ಲಾಭ ಆಗದು ಎಂದು ವಿವರಿಸಿದರು. ೧೫೦೦ ಕೋಟಿ ರೂ.ಗಳ ಅನುದಾನ ಉಳ್ಳ ಮಂಡಳಿಗೆ ಒಂದು ಕ್ಷೇತ್ರದ ಶಾಸಕರಿಗೆ ನಿಭಾಯಿಸುವುದು ಕಷ್ಟವಾಗುತ್ತದೆ.
ಸರ್ಕಾರ ತನ್ನ ನಿರ್ಣಯ ರದ್ದು ಮಾಡದಿದ್ದರೆ ನ್ಯಾಯಾಲ ಯದಲ್ಲಿ ದಾವೆ ಹಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರ್ಕಾರದ ಅವೈಜ್ಞಾನಿಕ ನಿರ್ಧಾರ ಜನರಿಗೆ ತೊಂದರೆ ಆಗಲಿದೆ. ರಾಜ್ಯದ ೮೬ ಮಂಡಳಿಗಳಂತೆ ಕೆಕೆಆರ್ ಡಿಬಿಯೂ ರಾಜಕೀಯ ಆಸ್ಥಾನ ಆಗಲಿದೆ ಎಂದು ದೂರಿದರು.