ಗ್ರಾಮಸ್ಥರು ಮನೆ ಬಿಟ್ಟು ಬರದಂತೆ ನಿಗಾ ವಹಿಸಿ

HHP 23-1
Published on

ಹೂವಿನಹಿಪ್ಪರಗಿ: ಸಮೀಪದ ಕುದರಿಸಾಲವಾಡಗಿ ಗ್ರಾಪಂ ವ್ಯಾಪ್ತಿಯ ಎಲ್ಲ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಗ್ರಾಪಂ ಸಿಬ್ಬಂದಿಗೆ ಕುದರಿಸಾಲವಾಡಗಿ ಗ್ರಾಪಂ ವತಿಯಿಂದ ಅವರ ಸುರಕ್ಷತೆಗಾಗಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಹ್ಯಾಂಡ್‌ಗ್ಲೌಸ್‌ಗಳನ್ನು ವಿತರಿಸಲಾಯಿತು.
ನಂತರ ಮಾತನಾಡಿದ ಗ್ರಾಪಂ ಪಿಡಿಒ ಬಸವರಾಜ ಬಡಗೇರ, ಪಂಚಾಯಿತಿ ವ್ಯಾಪ್ತಿಯ ಗ್ರಾಮದ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಬೇಕು. ಯಾರೂ ಮನೆ ಬಿಟ್ಟು ಹೊರಗೆ ಬರದಂತೆ ನಿಗಾ ವಹಿಸಬೇಕು. ಅವರಿಗೆ ಯಾವುದೇ ತೊಂದರೆ ಅನುಭವಿಸುತ್ತಿದ್ದಲ್ಲಿ ಕೂಡಲೇ ಅವರ ಜತೆಗೆ ಸ್ಪಂದಿಸಬೇಕು. ಜನರಿಗೆ ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ ತಿಳಿವಳಿಕೆ ನೀಡಬೇಕು. ಆಶಾ ಕಾರ್ಯಕರ್ತರಿಗೆ ಯಾವುದೇ ತೊಂದರೆಯಾದಲ್ಲಿ ಮೇಲಧಿಕಾರಿಗಳಿಗೆ ತಿಳಿಸಬೇಕು. ಹೊರ ಜಿಲ್ಲೆ, ರಾಜ್ಯಗಳಿಗೆ ಹಾಗೂ ಹೊರ ದೇಶಗಳಿಗೆ ಹೋಗಿ ಬಂದವರ ಕುರಿತು ಮಾಹಿತಿ ಸಂಗ್ರಹಿಸಬೇಕೆಂದು ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ದೇವಮ್ಮ ಹಚಡದ, ತಾಪಂ ಸದಸ್ಯ ಜಾಕೀರ್ ಹುಸೇನ್ ಶಿವಣಗಿ, ಉಪಾಧ್ಯಕ್ಷ ಪರಶುರಾಮ ಹರಿಜನ ಸೇರಿ ಆರೋಗ್ಯ, ಕಂದಾಯ ಇಲಾಖೆ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net