ಗ್ರಾಮೀಣ ಭಾಗದಲ್ಲಿಯೂ ಕರೊನಾ

HHP 11-1
Published on

ಹೂವಿನಹಿಪ್ಪರಗಿ: ಸಮೀಪದ ಕುದರಿಸಾಲವಾಡಗಿ ಗ್ರಾಮದ 24 ವರ್ಷದ ಮಹಿಳೆಯೊಬ್ಬರಿಗೆ ಕರೊನಾ ಪಾಸಿಟಿವ್ ದೃಢಪಟ್ಟ ಹಿನ್ನೆಲೆ ಗ್ರಾಮದ ರಂಗರಾವ ಮಹಾರಾಜ ಮಠದ ಪ್ರದೇಶವನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಪಂ ಪಿಡಿಒ ಬಿ. ಎಸ್. ಬಡಿಗೇರ ನೇತೃತ್ವದಲ್ಲಿ ಸೀಲ್‌ಡೌನ್ ಮಾಡಲಾಯಿತು.
ಕುದರಿಸಾಲವಾಡಗಿಯ ಗ್ರಾಮದ ಮಹಿಳೆ ಗರ್ಭಿಣಿ ಇರುವುದರಿಂದ ಅವರು ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಿಕೂಳ್ಳಲು ತಾಳಿಕೋಟೆ ಪಟ್ಟಣದ ಖಾಸಗಿ ಆಸ್ಪತ್ರೆಗೆ ಹೋಗುತ್ತಿದ್ದರು. ಆದರೆ, ಆ ಮಹಿಳೆಗೆ ಜ್ವರ ಬಂದ ಹಿನ್ನೆಲೆ ಅವರ ಗಂಟಲಿನ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಆದರೆ, ಆಕೆಗೆ ಶುಕ್ರವಾರ ಕರೊನಾ ಪಾಸಿಟಿವ್ ದೃಢಪಟ್ಟ ಕಾರಣ ತಾಲೂಕು ಆಡಳಿತ ವತಿಯಿಂದ ಶನಿವಾರ ಕುದುರಿಸಾಲವಾಡಗಿ ಗ್ರಾಮದ ರಂಗರಾವ ಮಹಾರಾಜ ಮಠದ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net