ಗೊಂದಲ ನಿವಾರಣೆಗೆ ಮತದಾರರ ಚೀಟಿ ಪರಿಷ್ಕರಣೆ; ವಿಜಯನಗರ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ; ತಹಸೀಲ್ ಕಚೇರಿಯ ಕಡತಗಳ ಪರಶೀಲನೆ

14122022 HADAGALI DC VISIT
Published on

ಹೂವಿನಹಡಗಲಿ: ಚುನಾವಣಾ ಸಂದರ್ಭದಲ್ಲಾಗುವಂತಹ ಅನೇಕ ರೀತಿಯ ಗೊಂದಲಗಳನ್ನು ನಿವಾರಿಸುವುದಕ್ಕಾಗಿ ಜಿಲ್ಲಾದ್ಯಂತ ಮತದಾರರ ಪಟ್ಟಿಯಲ್ಲಿರುವ ಮತದಾರರ ಗುರುತಿನ ಚೀಟಿಗಳನ್ನು ಪರಿಸ್ಕರಿಸಲಾಗುತ್ತಿದೆ ಎಂದು ಡಿಸಿ ಟಿ.ವೆಂಕಟೇಶ್ ಹೇಳಿದರು.

ತಹಸೀಲ್ ಕಚೇರಿಗೆ ಮಂಗಳವಾರ ಭೇಟಿ ನೀಡಿ ಕಡತಗಳನ್ನು ಪರಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಬಿಎಲ್‌ಒಗಳು ಸಾರ್ವಜನಿಕರ ಮನೆ ಮನೆಗೆ ತೆರಳಿ ಮತದಾರರ ಗುರುತಿನ ಚೀಟಿಗೆ ಆಧಾರ್‌ಸಂಖ್ಯೆ ಜೋಡಣೆಯ ಬಗ್ಗೆ ಮಾಹಿತಿ ನೀಡಿ, ಮತದಾರರ ಗುರುತಿನ ಚೀಟಿಗಳನ್ನು ತಿದ್ದುಪಡಿ ಮಾಡುತ್ತಿದ್ದಾರೆ. ಸ್ವಯಂಪ್ರೇರಿತವಾಗಿ ಮತ್ತು ಸರ್ಕಾರದ ಸೂಚನೆಯಂತೆ 18 ವರ್ಷ ಮೇಲ್ಪಟ್ಟ ವಯಸ್ಕರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದಾರೆ. ಹೊಸದಾಗಿ ತಾಲೂಕಿನಾದ್ಯಂತ ಸುಮಾರು 3828 ಮತದಾದರು ಮತದಾರರಪಟ್ಟಿಗೆ ಸೇರ್ಪಡೆಯಾಗಿ ಗುರುತಿನ ಚೀಟಿ ಪಡೆದಿದ್ದಾರೆ.

ಪಟ್ಟಣದ ಎಂಪಿಪಿ ನಗರದ ಪಕ್ಕದ ಹಳ್ಳದಲ್ಲಿ ಆ ಭಾಗದ ರೈತರು ಕೃಷಿ ಚಟುವಟಿಕೆಗಾಗಿ ತಮ್ಮ ಭೂಮಿಗಳಿಗೆ ತೆರಳುತ್ತಿದ್ದಾರೆ. ಅಲ್ಲಿ ಒಂದು ರಸ್ತೆಯನ್ನು ನಿರ್ಮಿಸಿಕೊಂಡುವಂತೆ ರೈತರು ಮನವಿ ಮಾಡಿಕೊಂಡಿದ್ದಾರೆ. ಸರ್ವೇ ಇಲಾಖೆಗೆ ಹಳ್ಳದ ಬದುವನ್ನು ಸರ್ವೇ ಮಾಡುವಂತೆ ಸೂಚನೆ ನೀಡಲಾಗಿದೆ. ಸರ್ವೆ ಇಲಾಖೆಯ ಮಾಹಿತಿಯಂತೆ ಅವಕಾಶವಿದ್ದರೆ ಆ ಸ್ಥಳದಲ್ಲಿ ಕಚ್ಚಾ ರಸ್ತೆಯನ್ನು ನಿರ್ಮಿಸಿ ಕೊಡಲಾಗುವುದು. ತಾಲೂಕಿನಾದ್ಯಂತ ಅನೇಕ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಆ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net