ಪುರಸಭೆ ಕಚೇರಿ ನವೀಕರಣಕ್ಕೆ ಹೆಚ್ಚುವರಿ ಹಣ

hadagali mla
ಹೂವಿನಹಡಗಲಿಯಲ್ಲಿ ಪುರಸಭೆ ಕಚೇರಿಯ ನವೀಕರಣ ಕಾಮಗಾರಿಗೆ ಶಾಸಕ ಕೃಷ್ಣನಾಯ್ಕ ಸೋಮವಾರ ಚಾಲನೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷರಾದ ಕೋಡಿಹಳ್ಳಿ ಕೊಟ್ರೇಶ್, ವಾರದಗೌಸ್ ಮೊಹಿದ್ದೀನ್, ಮಾಜಿ ಉಪಾಧ್ಯಕ್ಷ ತಿಮ್ಮಣ್ಣ ಇತರರಿದ್ದರು.
Published on

ಹೂವಿನಹಡಗಲಿ: ಪಟ್ಟಣದ ಹಳೇ ಮಿನಿವಿಧಾನಸೌಧ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿರುವ ಪುರಸಭೆ ಕಚೇರಿ ನವೀಕರಣಕ್ಕೆ 67 ಲಕ್ಷ ರೂ. ಜತೆಗೆ ಹೆಚ್ಚುವರಿಯಾಗಿ 1.5 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಪಟ್ಟಣದಲ್ಲಿ ಪುರಸಭೆಯ ಕಚೇರಿ ನವೀಕರಣ ಕಾಮಗಾರಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಪುರಸಭೆ ಕಚೇರಿಯನ್ನು ಹಳೇ ಮಿನಿವಿಧಾನಸೌಧ ಕಚೇರಿಗೆ ಸ್ಥಳಾಂತರಿಸಲಾಗುತ್ತಿದೆ. ಆದರೆ ಕಚೇರಿಯಲ್ಲಿ ಮೂಲ ಸೌಲಭ್ಯಗಳ ಕೊರತೆ ಇದ್ದು 67 ಲಕ್ಷ ರೂ.ಗಳ ಮೊತ್ತದಲ್ಲಿ ನವೀಕರಣ ಕಾಮಗಾರಿ ಆರಂಭಿಸಲಾಗಿದೆ.

ಇನ್ನುಳಿದಂತೆ ಕಚೇರಿಯ ಸುತ್ತ ತಡೆಗೋಡೆ ಮತ್ತು ಶೌಚಗೃಹ, ಇತರ ಸೌಲಭ್ಯಗಳನ್ನು ಹೆಚ್ಚಿಸಲು ಸುಮಾರು 1.5 ಕೋಟಿ ರೂ. ಅನುದಾನ ನಿಡಲಾಗುವುದು. ಪಟ್ಟಣದಲ್ಲಿ ಸ್ವಚ್ಛ ಭಾರತ್ 2 ಅಡಿ ಸಾರ್ವಜನಿಕರಿಗೆ ಅನುಕೂಲವಾಗಲು ಎಂಟು ಕಡೆ ಹೈಟೆಕ್ ಶೌಚಗೃಹ ಹಾಗೂ ಮೂರು ಕಡೆ ಮೂತ್ರ ವಿಸರ್ಜನೆ ಗೃಹಗಳ ನಿರ್ಮಾಣ ಕಾಮಗಾರಿ ಆರಂಭಿಸಲಾಗಿದೆ ಎಂದರು.

ತರ ಪಟ್ಟಣದ ಮದಲಗಟ್ಟಿ ವೃತ್ತದಲ್ಲಿ 25 ಲಕ್ಷ ರೂ. ಮೊತ್ತದ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಪುರಸಭೆ ಮಾಜಿ ಅಧ್ಯಕ್ಷರಾದ ಕೋಡಿಹಳ್ಳಿ ಕೊಟ್ರೇಶ್, ವಾರದಗೌಸ್ ಮೊಹಿದ್ದೀನ್, ಮಾಜಿ ಉಪಾಧ್ಯಕ್ಷ ತಿಮ್ಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net