ವೃತ್ತಿಪರ ನಿರ್ದೇಶಕರಾಗಿ ಉಮ್ಮಣ್ಣವರ ಆಯ್ಕೆ

HHP-23-2
Published on

ಹೂವಿನಹಿಪ್ಪರಗಿ: ಸಮೀಪದ ಯಾಳವಾರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವೃತ್ತಿಪರ ನಿರ್ದೇಶಕರಾಗಿ ಯಾಳವಾರ ಗ್ರಾಮದ ಎಂ.ಬಿ. ಉಮ್ಮಣ್ಣವರ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ರಾಜುಗೌಡ ನಾಡಗೌಡ ಮಾತನಾಡಿ, ಈ ಹಿಂದೆ ಎಂ. ಬಿ. ಉಮ್ಮಣ್ಣವರ ಅವರನ್ನು ಯಾಳವಾರ ಪಿಕೆಪಿಎಸ್‌ಗೆ ವೃತ್ತಿಪರ ನಿರ್ದೇಶಕರನ್ನಾಗಿ ನೇಮಕ ಮಾಡುವಂತೆ ಸಹಾಯಕ ನಿಬಂಧಕರು ಸಹಕಾರಿ ಸಂಘಗಳ ಉಪವಿಭಾಗ ವಿಜಯಪುರ ಇವರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಅವರ ಆದೇಶದ ಮೇರೆಗೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಸೇರಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ ಎಂದು ತಿಳಿಸಿದರು.

ನೂತನ ನಿರ್ದೇಶಕ ಎಂ.ಬಿ. ಉಮ್ಮಣ್ಣವರ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎಚ್.ಎಸ್. ದಳವಾಯಿ, ಪಮ್ಮಣ್ಣ ನಾಯಕೋಡಿ, ಆನಂದ ಮೂಲಿಮನಿ, ಸೋಮನಗೌಡ ಕೆಮಶೆಟ್ಟಿ, ಸಂಗನಗೌಡ ತೆಗ್ಗಿನಮನಿ, ಅಪ್ಪಣ್ಣ ಚಾಂದಕವಟಗಿ, ಸಿಬ್ಬಂದಿ ಚನ್ನಬಸು ಲಗಳಿ, ದಯಾನಂದ ಗುರುಮಠ, ಮಲ್ಲಪ್ಪ ಕಾಮನಕೇರಿ ಮಲಕಪ್ಪ ಉಪ್ಪಾರ, ಯಲ್ಲಪ್ಪ ಬೂದಿಹಾಳ, ಮೋಮಿನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net