ಡಿಎಸ್‌ಎಸ್ ಪ್ರತಿಭಟನೆ

hhp-14-1
Published on

ಹೂವಿನಹಿಪ್ಪರಗಿ: ಇಂಡಿ ತಾಲೂಕಿನ ಮಾರ್ಸನಹಳ್ಳಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಭಾವಚಿತ್ರಕ್ಕೆ ಕಿಡಿಗೇಡಿಗಳು ಅವಮಾನಿಸಿದ್ದನ್ನು ಖಂಡಿಸಿ ಡಿಎಸ್‌ಎಸ್ ಹಾಗೂ ಕರವೇ ಕಾರ್ಯಕರ್ತರು ಹೂವಿನಹಿಪ್ಪರಗಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್ ಕಾರ್ಯಾಲಯದ ಕಂದಾಯ ನಿರೀಕ್ಷಕ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಸ್ಥಳೀಯ ಪರಮಾನಂದ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಟಯರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ಕರವೇ ವಲಯ ಅಧ್ಯಕ್ಷ ಸಿದ್ದು ಮೇಟಿ ಮಾತನಾಡಿ, ಸಂವಿಧಾನ ಶಿಲ್ಪಿ ಈ ದೇಶಕ್ಕೆ ಬಹುದೊಡ್ಡ ಕೊಡುಗೆ ಕೊಟ್ಟ ಡಾ. ಅಂಬೇಡ್ಕರ್ ಅವರಿಗೆ ಅವಮಾನಿಸಿರುವುದು ಖಂಡನೀಯ. ಕೂಡಲೇ ಘಟನೆಗೆ ಕಾರಣರಾದ ದುಷ್ಕರ್ಮಿಗಳನ್ನು ಬಂಧಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ಪ್ರಭಾರಿ ಕಂದಾಯ ನೀರೀಕ್ಷಕ ಬಿ.ಬಿ. ಕಮತ ಅವರಿಗೆ ಮನವಿ ಸಲ್ಲಿಸಲಾಯಿತು. ಸಂಗಮೇಶ ದೊಡಮನಿ, ಜಾಮಿನ್ ಸಿಂದಗೇರಿ, ತಾಲೂಕು ಅಧ್ಯಕ್ಷ ಗಂಗಾಧರ ಇಂಗಳೇಶ್ವರ, ದಲಿತ ಮುಖಂಡರಾದ ಪ್ರಭು ಭಾಟಿಕಾರ, ಸಂಜೀವ ಮೇಲಿನಮನಿ, ಮಲ್ಲಪ್ಪ ಮಾದರ, ಶಿವರಾಜ ದೊಡಮನಿ, ಬಸನಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net