ರೈತಗೆ ಸೇರಿದ ರೂ.2.75 ಲಕ್ಷ ಕಳ್ಳತನ

theft
Published on

ಹೂವಿನಹಡಗಲಿ: ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಹಣ ಬಿಡಿಸಿಕೊಂಡು ಹೊರಟಿದ್ದ ರೈತಗೆ ಚಳ್ಳೆಹಣ್ಣು ತಿನಿಸಿದ ಖದೀಮರು, ಶುಕ್ರವಾರ 2.75 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.

ಹಗರಿಬೋಮ್ಮನಹಳ್ಳಿ ತಾಲೂಕಿನ ಏಣಿಗಿ ಬಸಾಪುರ ಗ್ರಾಮದ ದಾಳಿಂಬೆ ಬೆಳೆಗಾರ ದೊಡ್ಡಬಸಪ್ಪ ಹಣ ಕಳೆದುಕೊಂಡ ಕೃಷಿಕ. ತಮ್ಮ ಹಣವನ್ನು ವೀರನಗೌಡ ಅವರ ಖಾತೆಗೆ ಜಮೆ ಮಾಡಿದ್ದ ಹಣವನ್ನು ದೊಡ್ಡಬಸಪ್ಪ ವೀರನಗೌಡರ ಜತೆ ಸೇರಿ ಬ್ಯಾಂಕ್‌ನಿಂದ ಬಿಡಿಸಿಕೊಂಡಿದ್ದಾರೆ. ನಂತರ ಇಬ್ಬರೂ ಸೇರಿ ಪಟ್ಟಣದ ಬಿಡಿಸಿಸಿ ಬ್ಯಾಂಕ್ ಬಳಿಯ ಹೋಟೆಲ್‌ವೊಂದರಲ್ಲಿ ಟೀ ಕುಡಿಯಲು ಹೋಗಿದ್ದಾರೆ. ಇವರ ವಟುವಟಿಕೆಗಳನ್ನು ಗಮನಸಿದ ಖದೀಮರು, ಅವರು ದ್ವಿಚಕ್ರ ವಾಹನದ ಬ್ಯಾಗಿನಲ್ಲಿಟ್ಟಿದ್ದ ಹಣವನ್ನು ಕದ್ದು, ಪರಾರಿಯಾಗಿದ್ದಾರೆ. ಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net